ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಸಚಿವ ಜಾರ್ಜ್‌ರನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ ಎಂದು ಕುಮಾರಸ್ವಾಮಿ ಹೇಳಿದರು. ಈ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ.
ಸಂಪದ್ಭರಿತ ರಾಜ್ಯವನ್ನು ಕೊಳ್ಳೆ ಹೊಡೆದು ಪ್ರತಿ ದಿನ ಸೂಟ್‌ಕೇಸ್‌ಗಳನ್ನು ತುಂಬಿಸಿ ದೆಹಲಿ ಹೈಕಮಾಂಡ್‌ಗೆ ಕಪ್ಪ, ಕಾಣಿಗೆ ಕೊಟ್ಟು ಬರುತ್ತಾರೆ. ಈ ಹಕ್ಕಬುಕ್ಕರು ಅಂದರೆ ಮುಖ್ಯಮಂತ್ರಿ ಮತ್ತು ಜಾರ್ಜ್ ವಿಶೇಷ ವಿಮಾನದಲ್ಲಿ ಹೋಗುವುದು ಇದೇ ಕಾರಣಕ್ಕಾಗಿ. ನಾನು ಹೇಳುವುದಕ್ಕಿಂತ ಹೆಚ್ಚಾಗಿ ಶ್ರೀನಿವಾಸ್ ಪ್ರಸಾದ್ ಈ ಕುರಿತು ಹೇಳಿದ್ದಾರೆಂದು ಕುಮಾರಸ್ವಾಮಿ ನುಡಿದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಇದು ಸಂಪೂರ್ಣ ಬೇಜವಾಬ್ದಾರಿ ಹೇಳಿಕೆ ಎಂದು ಟೀಕಿಸಿದರು. ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಎಂಡ್ ರನ್ ಕೇಸ್ ಎಂದು ವ್ಯಂಗ್ಯವಾಡಿದರು.
Comments are closed.