ಕುಂದಾಪುರ: ಕೋಟೆಶ್ವರ ಕಟ್ಕರೆಯ ಕಾರ್ಮೆಲ್ ಆಶ್ರಮದಲ್ಲಿ ಕಾರ್ಮೆಲ್ ಮೇಳದ ಧರ್ಮಗುರುಗಳು ತಮ್ಮ ಸಂಸ್ಥೆಯ ಪೋಷಕರಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದ ಕಾರ್ಮೆಲ್ ಮೇಳದ ಧಾರ್ಮಿಕ ಎಪಿಸ್ಕೊಪಲ್ ಧರ್ಮಗುರು ಅ|ವ|ಪಿಯುಸ್ ಜೆಮ್ಸ್ ಡಿಸೋಜಾ, ಪವಿತ್ರ ಬಲಿದಾನವನ್ನು ನೆಡೆಸಿಕೊಟ್ಟರು ’ಕಾರ್ಮೆಲ್ ಮಾತೆ ಎಲ್ಲರ ಸಂಕಶ್ಟಗಳನ್ನು ಆಲಿಸುತ್ತಾರೆ, ಅವರು ಬಹಳ ದಯಾಳುಗಳಾಗಿದ್ದಾರೆ, ನಿಜವಾದ ದಯೆಯು ತಾಯಿಯ ಗರ್ಭದಿಂದ ಬರುವುದಾಗಿದೆ, ಅದು ಮಕ್ಕಳಿಗಾಗಿ ಸಿಗುವ ಗರ್ಭಾದರಿತ ದಯೆ, ಆದರೆ ನಮಗೆಲ್ಲರಿಗೂ ಇಂತಹ ಅಪ್ಪಟ ದಯೆಯು ಏಸು ಮತ್ತು ಮಾತೆ ಮೇರಿಯಲ್ಲಿ ದೊರಕುತ್ತದೆ, ಹಾಗೇಯೆ ನಾವೂ ಕೂಡ ಇತರರಲ್ಲಿ ಅಪ್ಪಟ್ಟ ದಯಾಪರರಾಗಿ ಜೀವಿಸೊಣ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಕಟ್ಕರೆ ಆಶ್ರಮದ ಪ್ರಧಾನರಾದ ಧರ್ಮಗುರು ವ|ಫೆಲಿಕ್ಸ್ ಮೊರಾಸ್ ಸಹ ಬಲಿದಾನದ ಈ ಪೂಜೆಯಲ್ಲಿ ಇತರ ಅನೇಕ ಧರ್ಮಗುರುಗಳು ಪಾಲ್ಗೊಂಡರು.
ಕಟ್ಕರೆಯ ಧರ್ಮಗುರು ವ|ವಿನ್ಸೆಂಟ್ ಡಿಸೋಜಾ ಇವರು ಸ್ವಾಗತ ಕೋರಿದರು, ಮಾಗ್ಲೊ, ಧರ್ಮಗುರು ವ| ರಾಯಾನ್ ಪಾಯ್ಸಾನ್ ಗಾಯಾನ ಮಂಡಳಿಯ ಉಸ್ತುವಾರಿಯನ್ನು ನೆಡೆಸಿಕೊಟ್ಟರು. ಧರ್ಮಗುರು ವ|ಫೆಲಿಕ್ಸ್ ಮೊರಾಸ್ ಧನ್ಯವಾದ ಅರ್ಪಿಸಿದರು. ಈ ಹಬ್ಬದಲ್ಲಿ ಅನೇಕ ಧರ್ಮ ಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
Comments are closed.