ಕರ್ನಾಟಕ

ನೇಕಾರರ ಸಂಘಕ್ಕೆ ಬದಲಿ ನಿವೇಶನ ನಿವಾದಕ್ಕೆ ಎಡೆಮಾಡಿದ ಬಿಡಿಎ ನಡೆ

Pinterest LinkedIn Tumblr

bdaಬೆಂಗಳೂರು, ಜು. ೧೯ -ಕಬ್ಬನ್‌ಪೇಟೆಯ ನೇಕಾರರ ಸಹಕಾರ ಸಂಘಕ್ಕೆ ಬದಲಿ ನಿವೇಶನ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ನೇಕಾರರ ಸಂಘಕ್ಕೆ ಸುಮಾರು 40 ಕೋಟಿ ಬೆಲೆ ಬಾಳುವ 21 ಗುಂಟೆ ಜಮೀನಿಗೆ ಬದಲಿ ನಿವೇಶನ ನೀಡಲು ಕಳೆದ ತಿಂಗಳು ನಡೆದ ಬಿಡಿಎ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಧಿಸೂಚನೆ ಹೊರಡಿಸದೆ ಬದಲಿ ನಿವೇಶನ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಬಿಡಿಎ ನೂತನ ಆಯುಕ್ತರಾಗಿ ರಾಜಕುಮಾರ ಕತ್ರಿ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಬದಲಿ ನಿವೇಶನ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಶಶಿಧರ್ ಸಮಿತಿಯು ಅಧಿಸೂಚನೆ ಹೊರಡಿಸದೆ ಬದಲಿ ನಿವೇಶನ ಹಂಚಿಕೆ ಮಾಡಬಾರದೆಂದು ಬಿಡಿಎಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಜಾರಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಬಿಡಿಎಗೆ ಆದೇಶ ನೀಡಿದ್ದರು.

ಇದೆಲ್ಲದರ ನಡುವೆಯೂ ಬಿಡಿಎ ಬದಲಿ ನಿವೇಶನ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದು ಇದು ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.