ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 65 ವರ್ಷ ವಯಸ್ಸಾಯಿತು ಎಂದರೇ ಅವರ ಅಭಿಮಾನಿಗಳು ನಂಬಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ತೆರೆಯ ಮೇಲೆ ರಜನಿಕಾಂತ್ ಅವರ ನಟನಾ ಶೈಲಿ. ಸದಾ ಸಕ್ರಿಯರಾಗಿರುವ ಈ ನಟ ತಮ್ಮ ಫಿಟ್ನೆಸ್ ಗುಟ್ಟನ್ನು ಇದೀಗ ತಿಳಿಸಿದ್ದು, ಯೋಗ ಹಾಗೂ ಡಯೆಟ್ ನನ್ನ ಉತ್ಸಾಹದ ಮೂಲ ಮಂತ್ರ ಎಂದು ಹೇಳಿದ್ದಾರೆ.
ಹೌದು, ಕಬಾಲಿ ಟೀಸರ್ನಲ್ಲಿ ಸ್ಟೈಲಿಷ್ ಗೆಟೆಪ್ನಲ್ಲಿ ಕಾಣಿಸಿಕೊಂಡ ರಜನಿಕಾಂತ್ರನ್ನು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಇವರಿಗೆ 65 ವಯಸ್ಸಾಯಿತಾ ಎಂದು ಉದ್ಘಾರ ತೆಗೆದಿದ್ದಾರೆ. ಈ ಕುರಿತು ರಜನಿ ಪ್ರತಿಕ್ರಿಯಿಸಿದ್ದು, ಉತ್ಸಾಹಿ ಯುವಕರಂತೆ ಚಟುವಟಿಕೆಯಿಂದರಲು ಮೂಲ ಕಾರಣ ಯೋಗ ಹಾಗೂ ಕಟ್ಟುನಿಟ್ಟಿನ ಡಯೆಟ್. ಸಕ್ಕರೆ, ಹಾಲು, ಅನ್ನ, ತುಪ್ಪ ಹಾಗೂ ಮೊಸರು ನನ್ನ ಹತ್ತಿರ ಸಹ ಸುಳಿಯುವುದಿಲ್ಲ. ಮುಂಜಾನೆ ಐದು ಗಂಟೆಗೆ ಎದ್ದು ಜಾಗಿಂಗ್ ಮಾಡುವುದನ್ನು ರೂಢಿಸಿಕೊಂಡಿರುವೆ. ಇದರಿಂದಾಗಿ ನಾನು ಆರೋಗ್ಯ ಹಾಗೂ ಉತ್ಸಾಹದಿಂದ ಇರಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಪ್ರತಿನಿತ್ಯ ಸಾಯಂಕಾಲ ವಾಕಿಂಗ್ ಹೋಗುವುದು ನನ್ನ ದಿನಚರಿಯಲ್ಲಿ ಸೇರಿದೆ. ಯೋಗ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಇದರ ಜತೆಗೆ ರಾತ್ರಿವೇಳೆ ಉತ್ತಮ ನಿದ್ದೆ ಮಾಡಲು ಯೋಗ ಸಹಾಯಕ ಎಂದು ತಿಳಿಸಿದ್ದಾರೆ.
ಬಹುನಿರೀಕ್ಷಿತ ಕಬಾಲಿ ಚಿತ್ರ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಏರ್ ಏಷ್ಯಾ ವಿಮಾನ, ಟೀಶರ್ಟ್, ಮಗ್, ಕೀಚೈನ್, ಗೊಂಬೆಗಳು, ಕಬಾಲಿ ಪಾಪ್ಕಾರ್ನ್, ಕಬಾಲಿ ಲಿಮಿಟೆಡ್ ಎಡಿಷನ್ ಕಾರ್, ಕಬಾಲಿ ಕೇಕ್, ಬೆಳ್ಳಿ ಕಾಯಿನ್, ಕಬಾಲಿ ಕೆಫೆ, ವಾಟ್ಸಾಪ್ ಎಮೊಜಿ, ಫೋನ್ ಕವರ್, ಹೀಗೆ ನಾನಾ ವಿಧಗಳಲ್ಲಿ ಕಬಾಲಿ ಮೆನಿಯಾ ಸೃಷ್ಟಿಯಾಗಿದೆ. ಅದರ ಬೆನ್ನಲ್ಲೇ ಬೆಂಗಳೂರು ಹಾಗೂ ಚೆನ್ನೆನ ಕೆಲ ಕಂಪನಿಗಳು ಕಬಾಲಿ ರಿಲೀಸ್ ದಿನವಾದ ಜುಲೈ22ರಂದು ರಜೆ ಘೊಷಿಸಿವೆ.
Comments are closed.