ಕರ್ನಾಟಕ

ನಮಗೆ ತೀಳಿಯದೇ ಇದ್ದ ಕೆಲವು ಸತ್ಯ ಸಂಗತಿಗಳು

Pinterest LinkedIn Tumblr

Fact_amising_mind

ಮಂಗಳೂರು : ಜೀವನದಲ್ಲಿ ನಾವು ಎಷ್ಟು ಕಲಿತರೂ ಅದು ಕಡಿಮೆಯೇ. ಏನಾದರೊಂದನ್ನು ನಾವು ಕಲಿಯುತ್ತಿರಬೇಕಾಗುತ್ತದೆ. ಪ್ರಕೃತಿಯ ಕೆಲವೊಂದು ಸತ್ಯಗಳು ನಮಗೆ ತಿಳಿದಿರುತ್ತದೆ. ಆದರೆ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟು ಇದೆ. ಯಾಕೆಂದರೆ ನಾವು ತಿಳಿದುಕೊಂಡಿರುವುದು ಸ್ವಲ್ಪ ಮಾತ್ರ. ಪ್ರಕೃತಿ, ಸಮಾಜ ಬದಲಾಗುತ್ತಲೇ ಇರುತ್ತದೆ.

ನಾವು ಅದಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಹೊಂದಿಕೊಳ್ಳುವ ಮೊದಲು ಕೆಲವನ್ನು ಕಲಿತುಕೊಂಡು, ಸತ್ಯ ಏನೆಂದು ತಿಳಿಯಬೇಕಾಗುತ್ತದೆ. ಇದನ್ನು ತಿಳಿದರೆ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ತೊಂದರೆಗೊಳಗಾಗುವ ಪ್ರಮೇಯ ಬರುವುದಿಲ್ಲ. ನಮ್ಮ ಸುತ್ತಮುತ್ತಲಿನ ಎಷ್ಟೋ ವಸ್ತುಗಳು ನಮಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತದೆ.

ಇದನ್ನು ಉಪಯೋಗಿಸುವುದನ್ನು ಕಲಿತುಕೊಳ್ಳಬೇಕಷ್ಟೇ. ದೇವರು ಮನುಷ್ಯನಿಗಾಗಿಯೇ ಉಪಯೋಗಕ್ಕಾಗಿ ವಸ್ತುಗಳನ್ನು ನಿರ್ಮಿಸಿದ್ದಾನೆ. ಇದು ತುಂಬಾ ಆಸಕ್ತಿದಾಯಕ ಹಾಗೂ ಕುತೂಹಲವನ್ನು ಉಂಟುಮಾಡುವಂತಹದ್ದು. ಇಂತಹ ಹಲವಾರು ರೀತಿಯ ಸತ್ಯಗಳು ನಮಗೆ ತಿಳಿದೇ ಇಲ್ಲ. ಇದನ್ನು ಈ ಲೇಖನದಲ್ಲಿ ತಿಳಿದುಕೊಂಡು ಮುಂದಕ್ಕೆ ಅದರ ಉಪಯೋಗ ಮಾಡಿಕೊಂಡು ಲಾಭ ಪಡೆಯಿರಿ….

೧.ಯಾವುದೇ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಿದ್ದಾರೆಯಾ ಎಂದು ತಿಳಿಯಬೇಕಾಗಿದೆಯಾ? ಹಾಗಾದರೆ ಅವರ ಕಣ್ಣುಗಳನ್ನೇ ನೋಡಿ. ಅವರ ಕಣ್ಣಗೊಂಬೆಗಳು ಶೇ. 45ರಷ್ಟು ಹೆಚ್ಚಿಗೆ ದೊಡ್ಡದಾಗಿದ್ದರೆ ಆಗ ನಿಮ್ಮ ಮೇಲೆ ಪ್ರೀತಿ ಇದೆಯೆಂದರ್ಥ.

೨.ಯಾವುದೇ ಹುಡುಗ/ಹುಡುಗಿ ನಿಮಗೆ ಸರಿಯಾದ ಮೊಬೈಲ್ ನಂಬರ್ ನೀಡುತ್ತಿಲ್ಲವೆಂದು ಅನಿಸುತ್ತಿದೆಯಾ? ಹಾಗಾದರೆ ಚಿಂತೆ ಮಾಡಬೇಡಿ. ಅವರ ನಂಬರ್ ಅನ್ನು ತಪ್ಪಾಗಿ ಓದಿ. ಆಗ ಅವರು ಅದನ್ನು ಸರಿಯೆಂದು ಹೇಳಿದರೆ ಅವರ ನಂಬರ್ ಬಗ್ಗೆ ಸುಳ್ಳು ಹೇಳುತ್ತಿದ್ದಾರೆಂದರ್ಥ.

೩.ಲಿಫ್ಟ್ನಲ್ಲಿ ಹೋಗಬೇಕಾದರೆ ಪ್ರತೀ ಮಹಡಿಗಳಲ್ಲಿ ಅದು ನಿಲ್ಲುವುದು ಇಷ್ಟವಿರುವುದಿಲ್ಲ. ಇದಕ್ಕಾಗಿ ನೀವು ಹೋಗುವ ಮಹಡಿ ಬಟನ್ ಮತ್ತು ಬಾಗಿಲು ಮುಚ್ಚುವ ಬಟನ್ ನ್ನು ಒಮ್ಮೆಲೇ ಒತ್ತಿ. ಆಗ ಬೇಡದಿರುವ ಮಹಡಿಗಳಲ್ಲಿ ಲಿಫ್ಟ್ ನಿಲ್ಲುವುದು ತಪ್ಪಲಿದೆ ಮತ್ತು ಬೇಗನೆ ತಲುಪಬಹುದು.

ನಿಮ್ಮ ಬಾಯಿ ವಾಸನೆ ಬರುತ್ತಿದೆಯಾ ಎಂದು ತಿಳಿಯಬೇಕೇ? ಅದಕ್ಕೆ ಹೀಗೆ ಮಾಡಿ ಮೊಣಕೈಯನ್ನು ನೆಕ್ಕಿ ಬಳಿಕ ಮೂಸಿ ನೋಡಿ. ವಾಸನೆ ಇದ್ದರೆ ಅದೇ ವಾಸನೆ ಬಾಯಿಯಲ್ಲಿರುತ್ತದೆ.

ಹಳದಿ ಹಲ್ಲುಗಳಿಂದ ನಿಮ್ಮ ನೆಮ್ಮದಿ ಕೆಟ್ಟಿದೆಯಾ? ಹಾಗಿದ್ದಲ್ಲಿ ಚಿಂತೆ ಬೇಡ, ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಎರಡು ನಿಮಿಷ ಉಜ್ಜಿ. ಖನಿಜಾಂಶಗಳು ಹೀರಲ್ಪಟ್ಟು ಹಲ್ಲುಗಳು ಬಿಳಿಯಾಗುವುದು.

ಫ್ರಿಡ್ಜ್ ನಲ್ಲಿ ತಿನ್ನಲು ಏನಾದರೂ ಹುಡುಕುತ್ತಿರುವಾಗ ಏನೂ ಸಿಗದಿದ್ದರೆ ಬೇಸರವಾದಾಗ ಒಂದು ಲೋಟ ನೀರು ಕುಡಿಯಿರಿ. ನಿಮ್ಮ ಹಸಿವನ್ನು ಇದು ಕಡಿಮೆ ಮಾಡುತ್ತದೆ.

ಗ್ಲಾಸ್ ಒಡೆದುಹೋಗಿದ್ದರೆ ಆಗ ಅದರ ಮೇಲೆ ಒಂದು ತುಂಡು ಬ್ರೆಡ್ ಹಾಕಿ. ಇದರಿಂದ ಗಾಜಿನ ಸಣ್ಣ ಸಣ್ಣ ತುಂಡುಗಳನ್ನು ಬ್ರೆಡ್ ಸೆಳೆದುಕೊಳ್ಳುತ್ತದೆ.

ಬ್ಯಾಟರಿ ಸರಿಯಾಗಿದೆಯಾ ಎಂದು ಪರೀಕ್ಷಿಸಲು ಇದ್ದರೆ ಆಗ ನೀವು ಮಾಡಬೇಕಾಗಿರುವುದು ಇಷ್ಟೇ. ಬ್ಯಾಟರಿಯನ್ನು ಹಿಡಿದು ನೆಲದಿಂದ 6 ಇಂಚು ಮೇಲಿಂದ ಕೆಳಗೆ ಎಸೆಯಿರಿ. ಆಗ ಸರಿಯಾಗಿದ್ದರೆ ಸ್ವಲ್ಪ ಮೇಲಕ್ಕೆ ಜಿಗಿದು ಕೆಳಗೆ ಬೀಳುತ್ತದೆ.

ಕಂಪ್ಯೂಟರ್ ನಲ್ಲಿ ಏನಾದರೂ ನೋಟ್ ಮಾಡಿಕೊಳ್ಳುತ್ತಿದ್ದರೆ ತುಂಬಾ ಪ್ರಾಮುಖ್ಯವಾಗಿರುವುದನ್ನು ಬೇರೆ ಫಾಂಟ್ ನಲ್ಲಿ ನೋಟ್ ಮಾಡಿಕೊಳ್ಳಿ. ಇದರಿಂದ ನಿಮಗೆ ಸರಿಯಾಗಿ ನೆನಪಿನಲ್ಲಿ ಉಳಿಯುವುದು.

ಕುಡಿಯುವಾಗ ಮದ್ಯ ಖಾಲಿಯಾಗುತ್ತಿದೆಯಾ? ಹಾಗಾದರೆ ಡಯಟ್ ಕೋಕ್ ಗೆ ಇದನ್ನು ಹಾಕಿ ಕುಡಿಯಿರಿ. ಇದರಿಂದ ಕಿಕ್ ಜಾಸ್ತಿಯಾಗುತ್ತದೆ.

Comments are closed.