MNG_ಫೇಸ್ಬುಕ್ ಇಂದು ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು ಮಾಸಿಕ 1.44 ಬಿಲಿಯನ್ ಸಕ್ರಿಯ ಆನ್ಲೈನ್ ಬಳಕೆದಾರರನ್ನು ಹೊಂದಿ ಸುದ್ದಿಯಲ್ಲಿದೆ. ನೀವು ಫೇಸ್ಬುಕ್ ಅನ್ನು ಹೆಚ್ಚು ಸಮಯದಿಂದ ಬಳಸುತ್ತಿದ್ದರೂ ಅದು ನೀವು ಅರಿಯದ ಕೆಲವೊಂದು ವಿಶೇಷತೆಗಳನ್ನು ಪಡೆದುಕೊಂಡಿದೆ ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.
ಆನ್ಲೈನ್ನಲ್ಲಿ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಬಳಸಲು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಉತ್ತಮ ಫೀಚರ್ಗಳನ್ನು ಒದಗಿಸುತ್ತದೆ. ಫೇಸ್‌ಬುಕ್ ಉತ್ತಮ ಫೀಚರ್ಸ್‌ಗಳನ್ನು ಇಲ್ಲಿ ನಾವು ನೀಡುತ್ತಿದ್ದು ಈ ಅಂಶಗಳು ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ. ಕೆಳಗಿನ ಸ್ಲೈಡರ್ಗಳಲ್ಲಿ ಇದನ್ನು ಕುರಿತು ಮಾಹಿತಿ ಪಡೆದುಕೊಳ್ಳಿ
ನಿಮ್ಮ ಹೆಸರನ್ನು ಸರಿಯಾಗಿ ಉಚ್ಛರಿಸುವುದು :
ನಿಮ್ಮ ಹೆಸರನ್ನು ಸರಿಯಾಗಿ ಉಚ್ಛರಿಸುವುದು ಹೇಗೆ ಎಂಬುದನ್ನು ನಿಮ್ಮ ಸ್ನೇಹಿತರಿಗೆ ತಿಳಿಸಬಹುದು. ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ ಅಲ್ಲಿ ಅಬೌಟ್ ಕ್ಲಿಕ್ ಮಾಡಿ ನಂತರ ನಿಮ್ಮನ್ನು ಕುರಿತಾದ ವಿವರಕ್ಕೆ ಹೋಗಿ. ಹೆಸರಿನ ಉಚ್ಛಾರಣೆ ಅಡಿಯಲ್ಲಿ, ನಿಮ್ಮ ಹೆಸರನ್ನು ಉಚ್ಛರಿಸುವುದು ಹೇಗೆ ಎಂಬದನ್ನು ಸೇರಿಸಿಕೊಳ್ಳಬಹುದು ಮತ್ತು ಕೊನೆಗೆ ಬದಲಾವಣೆಗಳನ್ನು ಉಳಿಸಿಕೊಳ್ಳಿ.
ಸ್ಕ್ರೀನ್ ರಿಸಿಪ್ಟ್ ನಿಷ್ಕ್ರಿಯ:
ಫೇಸ್‌ಬುಕ್ ಸಂದೇಶಗಳಿಗಾಗಿ ಸ್ಕ್ರೀನ್ ರಿಸಿಪ್ಟ್ ಅನ್ನು ನಿಮಗೆ ನಿಷ್ಕ್ರಿಯಗೊಳಿಸಬಹುದಾಗಿದೆ. ನೀವು ಕ್ರೋಮ್ ಬ್ರೌಸರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಫೇಸ್‌ಬುಕ್ ಅನ್ ಸ್ಕ್ರೀನ್ ಕ್ರೋಮ್ ಎಕ್ಸ್ಟೆನ್ಶನ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ ಇದು ನಿಮ್ಮ ಸಂದೇಶಗಳ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸುತ್ತದೆ. ಮೊಜೈಲಾ ಮತ್ತು ಇಂಟರ್ನೆಟ್ ಎಕ್ಸ್ಪ್ಲೋರರ್ಗಾಗಿ ಚಾಟ್ ಅಂಡರ್ ಡಿಟೆಕ್ಟೆಡ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸೀನ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.
ಇವೆಂಟ್‌ಗಳ ಎಕ್ಸ್‌ಪೋರ್ಟ್ :
ಗೂಗಲ್ ಕ್ಯಾಲೆಂಡರ್, ಐಕಾಲ್ ಅಥವಾ ಔಟ್ಲುಕ್ಗೆ ಫೇಸ್‌ಬುಕ್ ನಿಂದ ಹುಟ್ಟುಹಬ್ಬ ಮತ್ತು ಇವೆಂಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಸೆಟ್ಟಿಂಗ್ನಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಫೇಸ್‌ಬುಕ್‌ನಲ್ಲಿ ಈವೆಂಟ್ಗಳ ಪುಟಕ್ಕೆ ಹೋಗಿ ಮತ್ತು ಹುಟ್ಟುಹಬ್ಬ ಹಾಗೂ ಮುಂಬರಲಿರುವ ಈವೆಂಟ್ಗಳನ್ನು ಪುಟದ ಕೆಳಭಾಗಕ್ಕೆ ನಕಲಿಸಿ. ಗೂಗಲ್ ಕ್ಯಾಲೆಂಡರ್ ತೆರರಯಿರಿ ಮತ್ತು ಮೆನುವಿನಿಂದ ಇತರ ಕ್ಯಾಲೆಂಡರ್ಗಳನ್ನು ಕ್ಲಿಕ್ ಮಾಡಿ ಹಾಗೂ ಫೇಸ್‌ಬುಕ್ ಯುಆರ್‌ಎಲ್ ಅನ್ನು ಸೇರಿಸಿ.
ವೀಡಿಯೊಗಳನ್ನು ನಿಲ್ಲಿಸಲು:
ಈ ವೀಡಿಯೊಗಳನ್ನು ನಿಲ್ಲಿಸಲು ಫೇಸ್‌ಬುಕ್ ಅಪ್ಲಿಕೇಶನ್ > ಸೆಟ್ಟಿಂಗ್ಸ್ > ವೀಡಿಯೊ ಮತ್ತು ಪೋಟೋಗಳು > ಆಟೊ ಪ್ಲೇ ನಿಷ್ಕ್ರಿಯಗೊಳಿಸಿ.
ಕ್ಯಾಂಡಿ ಕ್ರಷ್ ರಿಕ್ವೆಸ್ಟ್:
ನಿಮ್ಮ ಸ್ನೇಹಿತರು ಕಳುಹಿಸುತ್ತಿರುವ ಕ್ಯಾಂಡಿ ಕ್ರಷ್ ರಿಕ್ವೆಸ್ಟ್ನಿಂದ ತೊಂದರೆ ಅನುಭವಿಸುತ್ತಿದ್ದೀರಾ? ಇದನ್ನು ತಡೆಯಲು ಫೇಸ್‌ಬುಕ್ ಅಪ್ಲಿಕೇಶನ್ನಲ್ಲಿ, ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ > ಮೊಬೈಲ್ ಪುಶ್ ಮತ್ತು ಅನ್ಚೆಕ್ ಅಪ್ಲಿಕೇಶನ್ ರಿಕ್ವೆಸ್ಟ್ ಹೀಗೆ ಮಾಡಿ.
ಫೇಸ್‌ಬುಕ್ ಪೋಸ್ಟ್:
ಫೇಸ್‌ಬುಕ್‌ನಲ್ಲಿ ಸಾಕಷ್ಟು ಲೇಖನಗಳು ಶೇರ್ ಆಗುವುದನ್ನು ನಾವು ಕಾಣುತ್ತೇವೆ, ಆದರೆ ಇದನ್ನೆಲ್ಲಾ ಓದುವಷ್ಟು ಸಮಯ ನಮ್ಮ ಬಳಿ ಇಲ್ಲ. ಅದರೆ ಇವುಗಳನ್ನು ಸೇವ್ ಮಾಡಿ ನಂತರ ಓದಿಕೊಳ್ಳಬಹುದಾಗಿದೆ. ಫೇಸ್ಬುಕ್ ಪೋಸ್ಟ್ ಮೇಲೆ ಬಾಣದ ಗುರುತನ್ನು ಕ್ಲಿಕ್ ಮಾಡಿ ಆಗ ಸೇವ್ ಲಿಂಕ್ ಆಪ್ಶನ್ ದೊರೆಯುತ್ತದೆ ಫೇಸ್‌ಬುಕ್ ಪುಟದಲ್ಲಿ ಎಲ್ಲಾ ಸೇವ್ ಮಾಡಿರುವ ಪೋಸ್ಟ್ಗಳು ಸೇವ್ ಮೆನುವಿನಲ್ಲಿ ದೊರೆಯುತ್ತದೆ.
ಫೇಸ್‌ಬುಕ್‌ನ ಲುಕ್ ಬ್ಯಾಕ್ ಪೇಜ್:
ಫೇಸ್‌ಬುಕ್‌ನ ಲುಕ್ ಬ್ಯಾಕ್ ಪೇಜ್ಗೆ ಹೋಗಿ ಮತ್ತು ಫೇಸ್‌ಬುಕ್ ಸಂಪೂರ್ಣ ಜೀವನವನ್ನು ನಿಮಗಿಲ್ಲಿ ಕಾಣಬಹುದಾಗಿದೆ. ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ವೀಡಿಯೊವನ್ನು ರಚಿಸುತ್ತದೆ ಇದು ನಿಮ್ಮ ಪ್ರಥಮ ಸ್ಮರಣೆಯನ್ನು ಫೀಚರ್ ಮಾಡುತ್ತದೆ, ನಿಮ್ಮ ಹೆಚ್ಚು ಮೆಚ್ಚಿದ ಫೋಟೋಗಳು ಮತ್ತು ಇತ್ತೀಚಿನ ಸಂಭವಗಳ ಕೊಲೇಜ್ ಅನ್ನು ಪಡೆದುಕೊಳ್ಳುತ್ತೀರಿ.
ಡ್ರಾಪ್ಬಾಕ್ಸ್ಗೆ ಟ್ಯಾಗ್:
ನಿಮ್ಮ ಡ್ರಾಪ್ಬಾಕ್ಸ್ಗೆ ಟ್ಯಾಗ್ ಮಾಡಿರುವ ಎಲ್ಲಾ ಫೋಟೋಗಳನ್ನು ನಿಮಗೆ ಉಳಿಸಿಕೊಳ್ಳಬಹುದಾಗಿದೆ. IFTTT.ಕಾಮ್ನಲ್ಲಿ ನೀವು ಖಾತೆಯನ್ನು ರಚಿಸಿಕೊಳ್ಳಬೇಕು. ಇಲ್ಲಿ ನಿಮಗೆ ಡ್ರಾಪ್ಬಾಕ್ಸ್ ಮತ್ತು ಫೇಸ್ಬುಕ್ ಖಾತೆಗಳನ್ನು ಸಂಪರ್ಕಪಡಿಸಿಕೊಳ್ಳಬಹುದು. ಖಾತೆ ದೃಢೀಕರಣ ಎಲ್ಲಾ ಮುಗಿದ ನಂತರ ನೀವು ಟ್ಯಾಗ್ ಮಾಡಿರುವ ಫೋಟೋಗಳು ನಿಮ್ಮ ಡ್ರಾಪ್ಬಾಕ್ಸ್ ಖಾತೆಗಳಿಗೆ ಉಳಿಸಿಕೊಳ್ಳಬಹುದು.
ಪೋಸ್ಟ್ ಮರೆ:
ಒಬ್ಬ ವ್ಯಕ್ತಿ ಅಥವಾ ಹೆಚ್ಚಿನವರಿಂದ ನಿಮ್ಮ ಪೋಸ್ಟ್ ಅನ್ನು ಮರೆಮಾಡಬಹುದಾಗಿದೆ. ಪೋಸ್ಟ್ ಬಟನ್ ನಂತರವಿರುವ ಮೆನುಗೆ ಕ್ಲಿಕ್ ಮಾಡಿ ಮತ್ತು ಕಸ್ಟಮ್ ಆಯ್ಕೆಮಾಡಿ ಹಾಗೂ ಫ್ರೆಂಡ್ ಅಥವಾ ಫ್ರೆಂಡ್ಸ್ ನೀವು ಯಾರಿಗೆ ಶೇರ್ ಮಾಡಲು ಬಯಸುದಿಲ್ಲವೋ ಅವರನ್ನು ಸೇರಿಸಿ.
ಫೀಚರ್:
ನಿಮಗೆ ಈ ಫೀಚರ್ ಗೊತ್ತಿರಬಹುದು. ಫ್ರೆಂಡ್ಸ್ ಲಿಸ್ಟ್ಗೆ ಹೋಗಿ ಮತ್ತು ಪ್ರೈವಸಿ ಹಾಗೂ ಫ್ರೆಂಡ್ ಲಿಸ್ಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ ಅದನ್ನು ಓನ್ಲಿ ಮಿ ಹೀಗೆ ಮಾಡಿ. ನಿಮ್ಮ ಸ್ನೇಹಿತರ ಪಟ್ಟಿಯನ್ನು ನೀವು ಮಾತ್ರವೇ ನೋಡಬಹುದಾಗಿದೆ.
Comments are closed.