ಕರ್ನಾಟಕ

ಅವಮಾನ ಬೆದರಿಕೆಗಳನ್ನು ಲೆಕ್ಕಿಸದೆ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ನೆರವಾದ ದೀಪಿಕಾ

Pinterest LinkedIn Tumblr

deepikaಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಂದ ಅವಮಾನ ಮತ್ತು ಬೆದರಿಕೆ ಅನುಭವಿಸಿದ್ದ ಡಿಸಿಎಫ್ ದೀಪಿಕಾ ಬಾಜ್ಪೈ, ಮಳೆ ನೀರಿನಿಂದ ಮುಳುಗಡೆಯಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಸಹಾಯ ಮಾಡಿದ್ದಾರೆ.

ಶುಕ್ರವಾರ ಭಾರೀ ಮಳೆಯಿಂದಾಗಿ ಮಡಿವಾಳ ಕೆರೆ ತುಂಬಿ ತುಳುಕಿ ಬೊಮ್ಮನಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿ ಪ್ರದೇಶ ಸಂಪೂರ್ಣ ಜಲಾವೃತವಾಗಿತ್ತು. ಆ ವೇಳೆ ಅಲ್ಲಿಗೆ ಭೇಟಿ ನೀಡಲು ಬಿಬಿಎಂಪಿ ಕಮಿಷನರ್ ಜತೆಗೆ ಬಂದಿದ್ದ ದೀಪಿಕಾ ಅವರಲ್ಲಿ ಸತೀಶ್ ರೆಡ್ಡಿ ನಾನು ಸಾಕಷ್ಟು ಬಾರಿ ಕರೆ ಮಾಡಿದ್ದೇನೆ. ನೀವು ಯಾಕೆ ಕರೆ ಸ್ವೀಕರಿಸಲಿಲ್ಲ?. ಕೆನ್ನೆಗೆ ಹೊಡೆದ್ರೆ ಹಲ್ಲು ಉದುರತ್ತೆ ಎಂದು ಬೈದಿದ್ದರು.

ಈ ಅವಮಾನ ಬೆದರಿಕೆಯ ನಂತರ ದೀಪಿಕಾ ಎಂದಿನಂತೆ ತಮ್ಮ ಕಾಯಕ ಮುಂದುವರಿಸಿದ್ದಾರೆ. ಶನಿವಾರ ಮಡಿವಾಳ ಕೆರೆ ಬಳಿಯ ಪ್ರದೇಶಕ್ಕೆ ಭೇಟಿ ನೀಡಿದ ದೀಪಿಕಾ ಅವರಿಗೆ, ಕರೆ ದಂಡೆಗಳ ಒತ್ತುವರಿಯಿಂದಾಗಿ ನೀರು ಕಟ್ಟಿ ನಿಂತಿರುವುದು ಕಂಡುಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಆಕೆ ತಮ್ಮ ಸಿಬ್ಬಂದಿಗಳ ಸಹಾಯದಿಂದ ನೀರಿಗೆ ಅಡಚಣೆಯಾಗಿರುವ ವಸ್ತುಗಳನ್ನು ತೆರವು ಮಾಡಿ ಕೆರೆಯಿಂದ ನೀರು ತುಂಬಿ ಹರಿಯದಂತೆ ವ್ಯವಸ್ಥೆ ಮಾಡಿದ್ದಾರೆ.

Where is our society going? Such conduct with an officer! https://t.co/hJb3UA6jKj @InBFirst
— Dipika Bajpai (@dipika_bajpai) July 29, 2016
pic.twitter.com/kMSoo3fUmr
— Dipika Bajpai (@dipika_bajpai) July 29, 2016
Finally blocked it pic.twitter.com/mh6OPV3mom
— Dipika Bajpai (@dipika_bajpai) July 29, 2016

Comments are closed.