ಕರ್ನಾಟಕ

ವಿಡಿಯೋ ಗೇಮ್ಸ್ ಮಾಯಾಜಾಲದಲ್ಲಿ ನಿದ್ದೆಯೇ ಮಾಯಾ

Pinterest LinkedIn Tumblr

video game

ವಿಡಿಯೋ ಗೇಮ್ಸ್ ಅಭ್ಯಾಸ ಮಾಡ್ಕೊಂಡ್ರೆ ನಿದ್ದೆಯನ್ನು ಮರೆತುಬಿಡ್ತಾರೆ. ಅವರಿಗೇ ಗೊತ್ತಿಲ್ಲದಂತೆ ರಾತ್ರಿಗಳು ಜಾರಿಹೋಗುತ್ತಿರುತ್ತವೆ. ವಿಡಿಯೋ ಗೇಮ್ಸ್ ಗೆ ದುಶ್ಚಟಕ್ಕೆ ಬಿದ್ದ ಬಹಳಷ್ಟು ಮಂದಿ ನಿದ್ದೆಗೆ ದೂರವಾಗುತ್ತಿದ್ದಾರೆ ಎಂಬುದು ಸಂಶೋಧಕರ ಅಧ್ಯಯನದಲ್ಲಿ ದೃಢಪಟ್ಟಿದೆ.

ವಿಡಿಯೋ ಗೇಮ್ಸ್ ಮಾಯಾಜಾಲದಲ್ಲಿ ಸಿಲುಕಿ ಬಹಳಷ್ಟು ಮಂದಿ ನಿದ್ದೆಯನ್ನು ದೂರ ಮಾಡಿಕೊಳ್ಳಿದ್ದಾರೆ. ಅಮೆರಿಕಾದಲ್ಲಿನ ಯೂನಿವರ್ಸಿಟಿ ಆಫ್ ನಾರ್ತ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ ಸಂಶೋಧಕರ ಅಧ್ಯಯನದಲ್ಲಿ ಈ ಸಂಗತಿ ಬೆಳಕು ಕಂಡಿದೆ.
ಆಲ್ ಲೈನ್ ನಲ್ಲಿ 963 ಮಂದಿ ವಿಡಿಯೋ ಗೇಮರ್ಸ್ ಮೇಲೆ ಮಾಡಿದ ಸಮೀಕ್ಷೆಯಲ್ಲಿ ಈ ಸಂಗತಿ ಗೊತ್ತಾಯಿತು. ಇವರು ವಾರದಲ್ಲಿ ಸರಾಸರಿ 4.6 ರಾತ್ರಿಗಳನ್ನು ವಿಡಿಯೋ ಗೇಮ್ಸ್ ಆಡುತ್ತಾ ಕಳೆಯುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿಯಿತು.

ವಿಡಿಯೋ ಗೇಮ್ಸ್ ಆಡುವವರು ಸಮಯಕ್ಕೆ ನಿದ್ರಿಸದೆ ಒಂದೂವರೆ ಗಂಟೆ ತಡವಾಗಿ ನಿದ್ದೆ ಮಾಡುತ್ತಿದ್ದಾರೆ. ಹೀಗೆ ಸರಾಸರಿ ತೆಗೆದುಕೊಂಡರೆ ಒಬ್ಬ ವ್ಯಕ್ತಿ ದಿನದಲ್ಲಿ ಶೇಕಡ 36ರಷ್ಟು ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾನೆ.
ವಿಡಿಯೋ ಗೇಮ್ಸ್ ದುಶ್ಚಟಕ್ಕೆ ಬಿದ್ದ ಕಾರಣ ಕೇವಲ ನಿದ್ದೆಯಷ್ಟೆ ಅಲ್ಲದೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯೂ ಕಡಿಮೆಯಾಗುತ್ತದೆ ಎಂಬುದನ್ನು ತಜ್ಞರು ಎಚ್ಚರಿಸಿದ್ದಾರೆ.

Comments are closed.