ಕರ್ನಾಟಕ

ಹರಳಿನ ಕುತೂಹಲಕಾರಿ ವಿಷಯ “ಹರಳು ಅದೃಷ್ಟವೋ ..ದುರಾದೃಷ್ಟವೋ.. ?

Pinterest LinkedIn Tumblr

dimonds_god_bad

ಭೂಮಿ ಮೇಲೆ ಅತ್ಯಂತ ದುಬಾರಿ ಹರಳಾಗಿರುವ ವಜ್ರದ ಬಗ್ಗೆ ಹಲವಾರು ಕಥೆಗಳು ಇವೆ. ಇದು ದೇಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಆಭರಣಗಳಲ್ಲಿ ಪೋಣಿಸಿದರೆ ತನಗೆ ಬೇರೆ ಸ್ಪರ್ಧೆಯೇ ಇಲ್ಲವೆನ್ನುವ ವಜ್ರದಿಂದ ಕೆಲವರು ನಷ್ಟ ಅನುಭವಿಸುತ್ತಾರೆ ಮತ್ತು ಕೆಲವರು ಅಭಿವೃದ್ಧಿ ಕಾಣುತ್ತಾರೆ ಎನ್ನುವ ನಂಬಿಕೆಯಿದೆ. ವಜ್ರ ಪ್ರತಿಯೊಬ್ಬರು ಹೊಂದಿಕೊಳ್ಳುತ್ತದೆಯಾ? ವಜ್ರದ ಬಗ್ಗೆ ಕೆಲವೊಂದು ಮಹತ್ವದ ಅಂಶಗಳು ಈ ಲೇಖನದಲ್ಲಿ ನೀಡಲಾಗಿದೆ. ಅದನ್ನು ತಿಳಿದುಕೊಳ್ಳುವ.

ರಾಜರ ಕಾಲದಿಂದಲೂ ಭಾರತದಲ್ಲಿ ವಜ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಅದರಲ್ಲೂ ಕೊಯಿನೂರು ವಜ್ರವೂ ವಜ್ರಗಳಲ್ಲಿ ರಾಜನೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕೋಹಿನೂರ್ ವಜ್ರವು ಹಲವಾರು ರಾಜರ ಕೈಗೆ ಹೋದ ಬಳಿಕ ಈಗ ಇಂಗ್ಲೆಂಡಿನ ಮಹಾರಾಣಿಯ ಕೀರಿಟವೇರಿ ಕುಳಿತುಕೊಂಡಿದೆ. ಆದರೆ ವಜ್ರವು ಅದೃಷ್ಟವನ್ನು ತರುತ್ತದೆ ಮತ್ತು ಅದೃಷ್ಟವನ್ನು ಕೆಡಿಸುತ್ತದೆ ಎನ್ನುವ ಮಾತಿದೆ. ಇದರಿಂದಾಗಿಯೇ ಕೋಹಿನೂರ್ ವಜ್ರವು ಹಲವಾರು ಸಾಮಾಜ್ಯಗಳನ್ನು ಧ್ವಂಸ ಮಾಡಿದೆ.

ವಜ್ರದ ಬಗ್ಗೆ ಇರುವ ನಂಬಿಕೆ ಹಿಂದೆ ವಜ್ರವನ್ನು ಸಾಮಾನ್ಯವಾಗಿ ನಿಶ್ಚಯ ಮತ್ತು ಮದುವೆಯ ಉಂಗುರಗಳಲ್ಲಿ ಬಳಸಲಾಗುತ್ತಿತ್ತು. ಇದು ಸಂಗಾತಿಗಳ ಮಧ್ಯೆ ಸಂಪರ್ಕವನ್ನು ಸಾಧಿಸುತ್ತದೆ ಎಂದು ನಂಬಲಾಗಿದೆ. ಪುರುಷರಲ್ಲಿ ಧೈರ್ಯ ಮತ್ತು ಮಹಿಳೆಯರಲ್ಲಿ ಗೌರವವನ್ನು ಉಂಟು ಮಾಡುತ್ತದೆ. ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ? ದುರಾದೃಷ್ಟವೇ?

ವಜ್ರವು ದುರಾದೃಷ್ಟವನ್ನು ಉಂಟು ಮಾಡಲಿದೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ವಜ್ರವನ್ನು ಧರಿಸುವುದರಿಂದ ವ್ಯಾಪಾರದಲ್ಲಿ ನಷ್ಟವಾಗಬಹುದು, ಅಪಘಾತವಾಗಬಹುದು ಅಥವಾ ಸಾವು ಸಂಭವಿಸಬಹುದು. ಪ್ರತಿಫಲಿಸುವ ಹರಳನ್ನು ದೂರವಿಡಬೇಕೇ?
ವಜ್ರವನ್ನು ತುಂಬಾ ಶಕ್ತಿಶಾಲಿ ಹರಳೆಂದು ಪರಿಗಣಿಸಲಾಗಿದೆ. ಕನ್ಯಾ ರಾಶಿ ಮತ್ತು ತುಲಾ ರಾಶಿಯಲ್ಲಿ ಹುಟ್ಟಿರುವಂತವರು ವಜ್ರವನ್ನು ಧರಿಸಬಹುದು. ಅವರಿಗೆ ಇದರಿಂದ ಅದೃಷ್ಟ ಮತ್ತು ಸಮೃದ್ಧಿಯಾಗುತ್ತದೆ.

ನೀವು ವಜ್ರ ಧರಿಸಬೇಕೆಂದು ಚಿಂತಿಸುತ್ತಿದ್ದೀರಾ? ವಜ್ರವು ನಿಮ್ಮ ರಾಶಿಗೆ ಹೊಂದಿಕೊಂಡರೆ ಆಗ ನಿಮಗೆ ಒಂದು ವಾರದೊಳಗೆ ಜೀವನದಲ್ಲಿ ಒಳ್ಳೆಯ ಹಾಗೂ ಧನಾತ್ಮಕ ಬದಲಾವಣೆ ಕಂಡುಬರುವುದು. ನಿಮಗೆ ಹೊಂದಿಕೊಳ್ಳದೆ ಇದ್ದರೆ ಆಗ ನಿಮಗೆ ಕೆಟ್ಟದಾಗುವುದು. ನೀವು ವಜ್ರವನ್ನು ಧರಿಸಬೇಕೇ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಹರಳು ನಿಮ್ಮ ಜೀವನವನ್ನು ಪರೀಕ್ಷಿಸಲಿದೆ.

ಇದರಲ್ಲಿ ಶಮನಕಾರಿ ಗುಣಗಳಿವೆಯಾ? ಸ್ವಭಾವದಲ್ಲಿ ತುಂಬಾ ಬಲವಾಗಿರುವ ವಜ್ರವು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡಲಿದೆ. ವಜ್ರವನ್ನು ಧರಿಸುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಕಾಣಿಸುವಂತಹ ಫಲವತ್ತತೆ ಸಮಸ್ಯೆಯು ನಿವಾರಣೆಯಾಗುವುದು.

ಯಾವ ವಜ್ರ ಧರಿಸಬೇಕು? ವಜ್ರದಲ್ಲಿ ಹಲವಾರು ಆಯ್ಕೆಗಳು ಇವೆಯಾದರೂ ಪಾರದರ್ಶಕವಾಗಿರುವ ವಜ್ರವನ್ನು ಧರಿಸಬೇಕು. ಇದು ತುಂಡಾಗಿರಬಾರದು ಅಥವಾ ಗೆರೆ ಬಿದ್ದಿರಬಾರದು.

ವಜ್ರ ಖರೀದಿಸಲು ಶುಭ ಸಮಯ ಶುಕ್ಲ ಪಕ್ಷದಲ್ಲಿ ಶುಕ್ರವಾರದಂದು ವಜ್ರವನ್ನು ಖರೀದಿಸಿದರೆ ತುಂಬಾ ಒಳ್ಳೆಯದು. ಭರಣಿ, ಪೂರ್ವ, ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರಗಳಲ್ಲಿ ವಜ್ರವನ್ನು ಖರೀದಿಸಬಹುದಾಗಿದೆ.

Comments are closed.