ಕರ್ನಾಟಕ

ಹೆಣ್ಣು ಮಗುವನ್ನು ಮಾರಲೆತ್ನಿಸಿ ಸಿಕ್ಕಿಬಿದ್ದ ದಂಪತಿ

Pinterest LinkedIn Tumblr

baby

ಕೋಲಾರ: ತಾನು ಹೆತ್ತ ಹೆಣ್ಣು ಮಗುವನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಇಲ್ಲಿ ನಡೆದಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ.

ಮಾಲೂರು ತಾಲ್ಲೂಕಿನ ಕೆಂಪಸಂದ್ರದ ಪಾರ್ವತಿ ಹಾಗೂ ಕೃಷ್ಣಪ್ಪ ದಂಪತಿಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಮಗುವನ್ನು 20 ಸಾವಿರ ರೂ.ಗೆ ಮಾರಾಟ ಮಾಡಲು ಪ್ರಯತ್ನ ನಡೆದು ಕೊನೆಗೆ ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೆ ಬಂದು ಮಗವನ್ನು ವಶಕ್ಕೆ ಪಡೆದು ದಂಪತಿಯನ್ನು ವಿಚಾರಣೆ ನಡೆಸಿದಾಗ ಪ್ರಕಣದ ಹಿಂದಿನ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ. ದಂಪತಿಗೆ ಈಗಾಗಲೇ 7 ಹೆಣ್ಣುಮಕ್ಕಳಿದ್ದು, ಗಂಡು ಸಂತಾನ ಬೇಕೆಂಬ ಹಠದಲ್ಲಿ 8ನೆ ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.

ಜಿಲ್ಲಾ ಮಕ್ಕಳ ಆರೋಗ್ಯ ರಕ್ಷಣಾ ಸಮಿತಿಯ ಅಧಿಕಾರಿಗಳು ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಬಡತನದ ಹಿನ್ನೆಲೆಯಲ್ಲಿ ಈ ರೀತಿ ಮಾಡಬೇಕಾಯಿತು. ನಮ್ಮ ತಪ್ಪನ್ನು ಕ್ಷಮಿಸಿ ಎಂದು ಪಾರ್ವತಿ ದುಂಬಾಲು ಬಿದಿದ್ದಾರೆ. ಮಗು ಮಾರಾಟದ ಘಟನೆಗಳು ಇಲ್ಲಿ ಪದೇ ಪದೇ ನಡೆಯುತ್ತಲೇ ಇದ್ದು, ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮಗುವಿನ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಹಣ ನೀಡಿ ಮಗುವನ್ನು ಕೊಂಡಿದ್ದವರ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

Comments are closed.