ಮೈಸೂರು: ನಗರದ ಕೋರ್ಟ್ ನಲ್ಲಿಸೋಮವಾರ ಸಂಭವಿಸಿದ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಪೊಲೀಸರು ರಾತ್ರಿಯಿಡಿ ಕೊರ್ಟ್ ಆವರಣದಲ್ಲಿ ಕಾರ್ಯಾರಚಣೆ ಕೈಗೊಂಡಿದ್ದಾರೆ. ಕೋರ್ಟ್ ಆವರಣವನ್ನು ತೀವ್ರ ತಪಾಸಣೆ ಮಾಡಿದ ಪೊಲೀಸರು ಶೌಚಾಲಯವನ್ನು ಶುಚಿಗೊಳಿಸುವ ಸಿಬ್ಬಂಧಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬಾಂಬ್ ಸ್ಪೋಟದ ಹಿನ್ನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ನಗರದಲ್ಲಿ ಇರುವುದು ಸುರಕ್ಷಿತವಲ್ಲ ಎಂಬ ಪೊಲೀಸ್ ಸಲಹೆಯ ಮೇರೆಗೆ ಸೋಮವಾರ ರಾತ್ರಿಯೇ ಸಿ. ಎಮ್. ಸಿದ್ಧರಾಮಯ್ಯ ಬೆಂಗಳೂರಿಗೆ ವಾಪಾಸಾಗಿದ್ದಾರೆ ಎಂದು ತಿಳಿದುಬಂದಿದೆ. ಮಗ ರಾಕೆಶ್ ಸಿದ್ಧರಾಮಯ್ಯರವರ ಅಂತ್ಯಕ್ರಿಯೆ ಮುಗಿದ ಬಳಿಕ ಸಿದ್ಧರಾಮಯ್ಯ ರಾತ್ರಿ ಪಾರ್ಮ್ ಹೌಸ್ ನಲ್ಲೇ ಉಳಿಯುವ ಯೋಜನೆಯಿತ್ತು. ಆದರೆ ಸುರಕ್ಷತಾ ಕ್ರಮವಾಗಿ ಸಿ.ಎಮ್. ಬೆಂಗಳೂರಿಗೆ ತಡರಾತ್ರಿ ತೆರಳಿದ್ದು ನಗರದಲ್ಲಿ ಪೊಲೀಸರು ಬಾಂಬ್ ಸ್ಪೂಟದ ಆರೋಪಿಗಾಗಿ ಬಲೆ ಬೀಸಿದ್ದಾರೆ.
Comments are closed.