ಕರ್ನಾಟಕ

ಪೊಲೀಸರ ಮೇಲೆ ಹಲ್ಲೆ: ಬೆಂಗಳೂರಿನಲ್ಲಿ ಹುಬ್ಬಳ್ಳಿ ಟೆಕ್ಕಿ, ಚೀನಿ ಪತ್ನಿ ಬಂಧನ

Pinterest LinkedIn Tumblr

arrest-9ಬೆಂಗಳೂರು: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಚೀನಾದ ಮಹಿಳೆ ಹಾಗೂ ಆಕೆಯ ಭಾರತೀಯ ಪತಿಯನ್ನು ಮಂಗಳವಾರ ಮಧ್ಯ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಚೀನಾ ಮಹಿಳೆ ಹಾಗೂ ಆಕೆಯ ಪತಿ ಕುಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಚೀನಾದ ಜೆಸ್ಸಿ ಮತ್ತು ಆಕೆಯ ಪತಿ ಹುಬ್ಬಳ್ಳಿ ಮೂಲದ, ಬೆಂಗಳೂರಿನ ಎಚ್ಎಚ್ಆರ್ ಲೇಔಟ್ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮಂಗಳವಾರ ಮಧ್ಯರಾತ್ರಿ 12.20ಕ್ಕೆ ಜೆಸ್ಸಿ ಮತ್ತು ಪ್ರಶಾಂತ್ ಇಬ್ಬರು ಎಂ.ಜಿ.ರಸ್ತೆಯಿಂದ ತೆರಳುತ್ತಿದ್ದ ವೇಳೆ ಮಾಣಿಕ್ ಶಾ ಪರೇಡ್ ಮೈದಾನದ ಬಳಿ ಯು ಟರ್ನ್ ತೆಗೆದುಕೊಳ್ಳುವಾಗ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ಸಹಾಯಕ್ಕೆ ಧಾವಿಸಿದ್ದಾರೆ ಮತ್ತು ಡ್ರಿಂಕ್ ಆಂಡ್ ಡ್ರೈವ್ ಚೆಕ್ ಮಾಡಲು ಬಂದ ಪೊಲೀಸರನ್ನು ನಿಂದಿಸಿದ್ದಾರೆ. ಈ ವೇಳೆ ವಿಡಿಯೋ ಮಾಡಲು ಮುಂದಾದ ಪೊಲೀಸ್ ಪೇದೆಯ ಮೇಲೆ ಜೆಸ್ಸಿ ಹಲ್ಲೆ ಸಹ ನಡೆಸಿದ್ದಾರೆ.

ನಂತರ ಪುಲಿಕೇಶಿನಗರ ಎಸಿಪಿ ನೂರುಲ್ಲಾ ಶರೀಫ್ ಅವರು ದಂಪತಿಗಳ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಚೀನಾ ಲೇಡಿ ಅವರ ಮಾತನ್ನು ಕೇಳದಿದ್ದಾಗ ಇಬ್ಬರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳು ವರ್ಷಗಳ ಹಿಂದೆ ಜೆಸ್ಸಿಯನ್ನು ಮದುವೆಯಾಗಿದ್ದ ಟೆಕ್ಕಿ ಪ್ರಶಾಂತ್ ಅವರು ಚೀನಾದಲ್ಲೇ ನೆಲೆಸಿದ್ದರು. ಆದರೆ ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದರು.

Comments are closed.