ಕರ್ನಾಟಕ

ಅಸಮಧಾನದ ಕುರಿತ ಬಿಎಸ್‌ವೈ ಸಭೆ: ಈಶ್ವರಪ್ಪ ಸೇರಿ ಅತೃಪ್ತರು ಗೈರು

Pinterest LinkedIn Tumblr

yeddyurappa--621x414ಬೆಂಗಳೂರು : ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕದ ಬಳಿಕ ಅಸಮಧಾನ ಭುಗಿಲೆದ್ದಿರುವ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಕರೆದಿದ್ದ ಮಹತ್ವದ ಬಿಜೆಪಿ ಸಭೆಗೆ ಈಶ್ವರಪ್ಪ ಸೇರಿದಂತೆ ಅತೃಪ್ತರು ಗೈರಾಗಿ ಶಾಕ್‌ ನೀಡಿದ್ದಾರೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಈಶ್ವರಪ್ಪ, ರಘುನಾಥ್‌ ಮಲ್ಕಾಪುರೆ , ನಿರ್ಮಲ್‌ ಕುಮಾರ್‌ ಸುರಾನಾ ,ಭಾನುಪ್ರಕಾಶ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ್‌ ಪೂಜಾರಿ ಅವರು ಗೈರಾಗಿದ್ದರು ಎಂದು ವರದಿ ತಿಳಿಸಿದೆ.

ವಿಶೇಷವೆಂದರೆ ಮುಖ್ಯ ಮಂತ್ರಿ ಗಳು ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಈಶ್ವರಪ್ಪ ಭಾಗಿಯಾಗಿದ್ದರು .ಬಿಜೆಪಿಯ ಮಹತ್ವದ ಸಭೆಗೆ ಗೈರಾಗಿ ಅಸಮಧಾನವನ್ನು ಹೊರಹಾಕಿದ್ದಾರೆ.

-ಉದಯವಾಣಿ

Comments are closed.