ಬೆಂಗಳೂರು, ಆ.೯-ನಕಲಿ ಸಹಕಾರ ಸಂಘ ಆರಂಭಿಸಿ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವುದಾಗಿ ವಂಚಿಸಿದ್ದ ಉಷಾರಾಣಿ ಅವರಿಗೆ ರೌಡಿ ಶೀಟರ್ ಯಶಸ್ವಿನಿ ಮತ್ತಾಕೆಯ ಸಹಚರರು ಹಾಗೂ ಮೋಸ ಹೋದ ಕೆಲವರು ಧರ್ಮದೇಟು ನೀಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಕತ್ರಿಗುಪ್ಪೆಯಲ್ಲಿ ನಡೆದಿದೆ.
ಮೋಸ ಹೋದ ಮಹಿಳೆ ಯಶಸ್ವಿನಿ ಇನ್ನಿತರರಿಂದ ಧರ್ಮದೇಟು ತಿಂದಿರುವ ಉಷಾರಾಣಿ ಮತ್ತಾಕೆಯ ಸಹಚರ ನರೇಂದ್ರಶರ್ಮ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಿಕೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಯಶಸ್ವಿನಿ ಮತ್ತಾಕೆಯ ಸಹಚರರು ನಮ್ಮ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಸಿದು ಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದು,ದೂರಿನ ವಿಷಯ ಗೊತ್ತಾದ ಯಶಸ್ವಿನಿ ಮತ್ತಿತರರು ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
ಕತ್ರಿಗುಪ್ಪೆಯ ಉಷಾರಾಣಿ ಹಾಗೂ ನರೇಂದ್ರ ಶರ್ಮ ಅವರು ಕರ್ನಾಟಕ ಕ್ಯಾಪ್ಟನ್ ಕೋ ಅಪರೇಟಿವ್ ಸೂಸೈಟಿ ಆರಂಭಿಸಿ ಅದನ್ನು ನೊಂದಾಯಿಸದೇ ಸ್ಥಳೀಯರಿಂದ ತಿಂಗಳಿಗೆ ಶೇ೧ಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ನೀಡುವುದಾಗಿ ಲಕ್ಷಾಂತರ ರೂಗಳ ಠೇವಣಿ ಹಣ ಸಂಗ್ರಹ ಮಾಡಿ ಬಡ್ಡಿ ಹೋಗಲಿ ಅಸಲು ಹಣ ಕೊಡದೇ ವಂಚಿಸಿದ್ದರು.
ವಂಚನೆಯ ವಿಷಯ ತಿಳಿದಿದ್ದ ಬಸವನಗುಡಿಯ ರೌಡಿ ಶೀಟರ್ ಯಶಸ್ವಿನಿ ಕೆಲವು ಸಹಚರರು ಹಾಗೂ ಮೋಸ ಹೋದವರೊಂದಿಗೆ ಸೇರಿ ಉಷಾರಾಣಿಯ ಮನೆ ಬಳಿ ಮಧ್ಯರಾತ್ರಿ ೧.೩೦ರ ವೇಳೆ ಹೋಗಿ ಉಷಾರಾಣಿಯನ್ನು ಹೊರಗೆ ಕರೆಸಿಕೊಂಡು ಧರ್ಮದೇಟು ನೀಡಿದ್ದಾರೆ.
ಹಲ್ಲೆಗೊಳಗಾದ ಉಷಾರಾಣಿಯ ಮುಖ ಇನ್ನಿತರ ಭಾಗಗಳಿಗೆ ಗಾಯಗಳಾಗಿದೆ ದೂರು ನೀಡಿದ ಉಷಾರಾಣಿ ಕುಟುಂಬ ಸಮೇತ ಪರಾರಿಯಾಗಿದ್ದು ಹಲ್ಲೆ ನಡೆಸಿರುವ ರೌಡಿ ಶೀಟರ್ ಯಶಸ್ವಿನಿ ಕೂಡ ತಲೆ ಮರೆಸಿಕೊಂಡಿದ್ದಾಳೆ.ಸಿಕೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.