ಮೈಸೂರು, ಆ.10– ಸಾಂಸ್ಕøತಿಕ ನಗರಿಯಲ್ಲಿ ಈಗ ಮೊಬೈಲ್ ಫೋನ್ ಕಳ್ಳರ ಕಾಟ ಶುರುವಾಗಿದೆ. ಪ್ರತಿದಿನ ಒಂದಲ್ಲ ಒಂದು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರುಗಳು ದಾಖಲಾಗುತ್ತಿವೆ. ಮಾಹಿತಿ ಪ್ರಕಾರ ಕಳೆದ ಒಂದು ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ವಿವಿಧ ಪೊಲೀಸ್ ಠಾಣೆಗಳಲ್ಲಿ ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಕಳವು ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಇದಲ್ಲದೆ, ಕೆಲ ದುಷ್ಕರ್ಮಿಗಳು ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ಫೋನ್ ಜತೆಗೆ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಫೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಮೂಲಗಳ ಪ್ರಕಾರ, ಇಲ್ಲಿ ಕದ್ದಂತಹ ಫೋನ್‍ಗಳನ್ನು ನೆರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಕಳ್ಳರು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚುತ್ತಿರುವ ಇಂತಹ ಪ್ರಕರಣಗಳನ್ನು ಮಟ್ಟ ಹಾಕಲು ಮೈಸೂರು ಪೊಲೀಸರು ಈಗ ಸೂಕ್ಷ್ಮ ಸ್ಥಳಗಳಲ್ಲಿ ಗಸ್ತನ್ನು ಹೆಚ್ಚಿಸುವುದರ ಜತೆಗೆ ಹಲವು ಶಿಸ್ತುಕ್ರಮಗಳನ್ನೂ ಕೂಡ ಕೈಗೊಳ್ಳಲಾಗಿದೆ. ವಿಶೇಷ ತಂಡಗಳನ್ನುಕೂಡ ರಚಿಸಿ ಪ್ರಕರಣ ಭೇದಿಸಲು ನಗರ ಪೊಲೀಸ್ ಆಯುಕ್ತರೇ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಇದರ ನಡುವೆ ಪೊಲೀಸರು ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿ ಜನನಿಬಿಡ ಪ್ರದೇಶಗಳು, ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆಯಿಂದಿರುವಂತೆ ತಿಳಿಸಿದ್ದಾರೆ.
Comments are closed.