ಬೆಂಗಳೂರು, ಆ. ೧೪- ನಿಂತಿದ್ದ ಕ್ಯಾಂಟರ್ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಮಗ-ಚಿಕ್ಕಪ್ಪ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ಕೂಡ್ಲು ಗೇಟ್‌ನ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆಡುಗೋಡಿಯ ಎಲ್.ಆರ್ ನಗರದ ಪ್ರಶಾಂತ್ (23) ಹಾಗೂ ಅವರ ಚಿಕ್ಕಪ್ಪ ಮುನಿಯಪ್ಪ (45) ಮೃತಪಟ್ಟವರು. ತಮಿಳುನಾಡಿನ ಸಂಬಂಧಿಕರ ಮನೆಗೆ ಹೋಗಿದ್ದ ಇವರಿಬ್ಬರು ಬೈಕ್‌ನಲ್ಲಿ ರಾತ್ರಿ 7.45ರ ಸುಮಾರಿನಲ್ಲಿ ಆಡುಗೋಡಿಗೆ ವಾಪಸ್ಸಾಗುತ್ತಿದ್ದರು.
ಮಾರ್ಗ ಮಧ್ಯೆ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯ ದಕ್ಷಿಣ್ ಹೊಂಡಾ ಮುಂಭಾಗ ನಿಂತಿದ್ದ ಕ್ಯಾಂಟರ್ ಲಾರಿಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸರ್ವೀಸ್ ಸೆಂಟರ್‌ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಗಾರೆ ಕೆಲಸ ಮಾಡುತ್ತಿದ್ದ ಮುನಿಯಪ್ಪನನ್ನು ಕರೆದುಕೊಂಡು ತಮಿಳುನಾಡಿನ ಸಂಬಂಧಿಕರ ಮನೆಗೆ ನಿನ್ನೆ ಬೆಳಿಗ್ಗೆ ಹೋಗಿ ರಾತ್ರಿ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ.
ಪ್ರಕರಣ ದಾಖಿಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಕ್ಯಾಂಟರ್ ನಿಲ್ಲಿಸಿ ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
Comments are closed.