ಕರ್ನಾಟಕ

ಕಾರು – ಬಸ್ ಡಿಕ್ಕಿ ಮಧ್ಯೆ ಸಿಲುಕಿದ ಬೈಕ್ ಸವಾರ ಪಾರು

Pinterest LinkedIn Tumblr

crime-1-3ಬೆಂಗಳೂರು, ಆ. ೧೮ – ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಿಲುಕಿದ ಸವಾರನೊಬ್ಬ ಕೂದಳೆಲೆಯಲ್ಲಿ ಪಾರಾದ ಘಟನೆ ಸ್ಯಾಂಕಿ ರಸ್ತೆಯ ವಿಂಡ್ಸರ್ ಮ್ಯಾನರ್ ಹೊಟೇಲ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿ ಶ್ರೀಕಾಂತ್ ಅವರು ಕೆಲಸ ಮುಗಿಸಿ ಮಧ್ಯರಾತ್ರಿ ೧೨ರ ವೇಳೆ ಮೆಜೆಸ್ಟಿಕ್‌ನಲ್ಲಿರುವ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿಂಡ್ಸರ್ ಮ್ಯಾನರ್ ಹೋಟೆಲ್ ಬಳಿ ಕೇರಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌ನ ಹಿಂದಿದ್ದರು.

ಅವರ ಹಿಂದೆ ಕಾರು ಬರುತ್ತಿದ್ದು ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಶ್ರೀಕಾಂತ್ ನಿಯಂತ್ರಣ ತಪ್ಪಿ ಎರಡೂ ವಾಹನಗಳ ಮಧ್ಯೆ ಸಿಲುಕಿದ್ದಾನೆ. ಅದೃಷ್ಟವಶಾತ್ ಬೈಕ್ ನಜ್ಜುಗುಜ್ಜಾಗಿದೆ. ಆದರೆ, ಸವಾರ ಶ್ರೀಕಾಂತ್ ಕ್ಷಣಮಾತ್ರದಲ್ಲಿ ಬಚಾವ್ ಆಗಿದ್ದಾನೆ.

ಈ ದುರ್ಘಟನೆಯಿಂದಾಗಿ ಕೆಲಕಾಲ ಮುಖ್ಯಮಂತ್ರಿಗಳ ನಿವಾಸ ಎದುರಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಹೈಗೌಂಡ್ಸ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.