ಕೋಲಾರ : ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ರಣಹೇಡಿಯಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ವಿರುದ್ದ ಮೃತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಡಿ.ಕೆ.ಶಿವಕುಮಾರ್ ಅವರ ಫೋಟೋ ಹಿಡಿದು ತಿರುಗಿದರೆ ದೇಶ ಉದ್ದಾರ ಆಗುತ್ತಾ ಎಂದು ಗೌರಮ್ಮ ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿಗಳಾದ ಎಂ.ಕೆ.ಗಣಪತಿ, ಕಲ್ಲಪ್ಪ ಹಂಡಿಬಾಗ್ ಹಾಗೂ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಭಾವಚಿತ್ರಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದುದನ್ನು ಅರ್ಧದಲ್ಲೆ ಸಚಿವ ಡಿಕೆಶಿ ತಡೆದಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವವರು ರಣಹೇಡಿಗಳು. ಹಾಗಾಗಿ ದೇಶಕ್ಕಾಗಿ ಹೋರಾಡಿದವರ ಫೋಟೊ ಪ್ರದರ್ಶಿಸಬೇಕೇ ಹೊರತು. ಇಂತಹವರ ಫೋಟೋ ಪ್ರದರ್ಶಿಸಬೇಡಿ ಎಂದು ನಾನೊಬ್ಬ ದೇಶಭಕ್ತನಾಗಿ ಇವರ ಫೋಟೋ ಪ್ರದರ್ಶನ ತಡೆದೆ ಎಂದಿದ್ದರು.
-ಉದಯವಾಣಿ
Comments are closed.