ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಖಂಡಿಸಿ ಶುಕ್ರವಾರ”ಕರ್ನಾಟಕದಲ್ಲಿ ಬಂದ್’ ಆಚರಿಸಲಾಗುತ್ತಿದ್ದು ಈ ವೇಳೆ ಮೂವರು ಹೋರಾಟಗಾರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಬೃಹತ್ ಪ್ರತಿಭಟನೆ ವೇಳೆ ಯುವಕನೊಬ್ಬ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು,ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೋಳರಪಾಳ್ಯ ನಿವಾಸಿ ಪ್ರಭು(30)ಎಂಬಾತ ರಕ್ತ ಕೊಟ್ಟೇವು ನೀರು ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಚೂರಿ ಇರಿದುಕೊಂಡಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕೆಆರ್ಎಸ್ ಬಳಿ ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ಪೊಲೀಸರು ರಕ್ಷಿಸಿ ದ್ದಾರೆ. ಇನ್ನೋರ್ವ ರೈತ ವಿಷ ಕುಡಿದು ಪ್ರತಿಭಟಿಸಲು ಮುಂದಾದಾಗ ಆತನನ್ನು ತಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಫೋಟೋ ಕೃಪೆ : ಟಿವಿ 9
-ಉದಯವಾಣಿ
Comments are closed.