ಕೊಪ್ಪಳ; ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಉತ್ತಮ ಬೆಂಬಲವ್ಯಕ್ತವಾಗಿದೆ. ಅಲ್ಲದೇ ಕೊಪ್ಪಳದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಇಲ್ಲಿನ ಬಸ್ ನಿಲ್ದಾಣದ ಸಮೀಪ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸೀರೆ ಉಡಿಸಿ, ಹೂ ಮುಡಿಸಿ ಸ್ತ್ರೀವೇಷ ಹಾಕಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಸಿಎಂ ಜಯಲಲಿತಾ ಭಾವಚಿತ್ರಕ್ಕೆ ರಾಕ್ಷಸಿ ವೇಷ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಬಾರುಕೋಲು ಚಳವಳಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಬೆಂಗಳೂರಲ್ಲಿ ಏಕಾಂಗಿ ಹೋರಾಟ:
ಬೆಂಗಳೂರಿನ ವಿಜಯನಗರದ ಬಸ್ ನಿಲ್ದಾಣದಲ್ಲಿ ಯುವಕ ವಿಕ್ರಂ ಏಕಾಂಗಿಯಾಗಿ ಕುಳಿತು ಒಂದು ದಿನದ ಉಪವಾಸ ಸತ್ಯಗ್ರಹ ಆಚರಿಸ್ತಿದ್ದಾರೆ. ನನ್ನ ನೀರಿಗಾಗಿ ನನ್ನ ಹೋರಾಟ ಅನ್ನೊ ಹೆಡ್‍ಬ್ಯಾಂಡ್ ಕಟ್ಟಿಕೊಂಡು ಹೋರಾಟ ಮಾಡುತ್ತಿರುವ ವಿಕ್ರಂ, ಅನ್ನದಾತನ ನೋವಿಗೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಫಲಕ ಹಿಡಿದುಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
-ಉದಯವಾಣಿ
Comments are closed.