ಕರ್ನಾಟಕ

ಕಾವೇರಿ ನದಿ ಎಲ್ಲಿದೆ;ಗೂಗಲ್ ಮ್ಯಾಪ್ ಸರ್ಚ್ ಮಾಡಿ ಅಚ್ಚರಿ ಆಗುತ್ತೆ!

Pinterest LinkedIn Tumblr

kaveri-map

ಬೆಂಗಳೂರು: ಕಾವೇರಿ ನೀರಿಗಾಗಿ ಹೋರಾಟ, ತಮಿಳುನಾಡಿನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತೀ ಬಾರಿಯೂ ಸೋಲಾಗಿದೆ. ಅದೇ ರೀತಿ ಕಾವೇರಿ ನದಿ ಎಲ್ಲಿದೆ ಅಂತ ಗೂಗಲ್ ಮ್ಯಾಪ್ ನಲ್ಲಿ ಸರ್ಜ್ ಮಾಡಿದ್ರೆ ಆಗ ನಿಮ್ಮ ಹುಬ್ಬೇರುವಂತೆ ಮಾಡುತ್ತೆ..ಕಾರಣ ಕಾವೇರಿ ನದಿ ತಮಿಳುನಾಡಿನಲ್ಲಿದೆ ಎಂದು ಗೂಗಲ್ ಲ್ಯಾಂಡ್ ಮಾರ್ಕ್ ತೋರಿಸುತ್ತಿದೆ!

ಭೂಪಟದಲ್ಲಿ, ಗೂಗಲ್ ಮ್ಯಾಪ್ ನಲ್ಲಿ ಈ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತದೆ. ಬಳಿಕ ತೀವ್ರ ವಿರೋಧ ವ್ಯಕ್ತವಾದ ನಂತರ ಬದಲಾವಣೆ ಕಾಣುತ್ತದೆ. ಈಗ ಗೂಗಲ್ ಮ್ಯಾಪ್, ಗೂಗಲ್ ಸ್ಯಾಟಲೈಟ್ ಸರ್ಜನಲ್ಲಿಯೂ ಕಾವೇರಿ (ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ) ಕರ್ನಾಟಕದಲ್ಲಿ ತೋರಿಸುತ್ತಿಲ್ಲ ಬದಲಾಗಿ ತಮಿಳುನಾಡು ಅಂತ ತೋರಿಸುತ್ತಿದೆ.

-ಉದಯವಾಣಿ

Comments are closed.