ತೆರೆಯಮೇಲೆ ಸಿಂಗಲ್ ರೋಲ್ ನಲ್ಲಿ ಕಾಣಿಸಿದ್ರೇನೆ ಪ್ರೇಕ್ಷಕರನ್ನ ಮೆಸ್ಮರೈಜ್ ಮಾಡ್ತಾರೆ ನಾಯಕಿ ತ್ರಿಷಾ. ಇನ್ನು ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡ್ರಂತು ಅಭಿಮಾನಿಗಳಿಗೆ ಹಬ್ಬವೆ ಸರಿ. ಇತ್ತೀಚಿಗೆ ಬಂದ ‘ನಾಯಕಿ’ ಚಿತ್ರದಲ್ಲಿ ತ್ರಿಷಾ ಎರಡು ಶೆಡ್ ಗಳಲ್ಲಿ ಕಾಣಿಸಿಕೊಂಡು, ಫ್ಯಾನ್ಸ್ಗೆ ಸ್ವೀಟ್ ಶಾಕ್ ಕೊಟ್ಟಿದ್ರು. ಅಂತಾದ್ರಲ್ಲಿ ಇದೀಗ ಸಿನಿಮಾ ಒಂದರಲ್ಲಿ ಏಕಾಏಕಿ ಐದು ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಚೆನ್ನೈ ಮೂಲಗಳಿಂದ ಕೇಳಿ ಬರ್ತಿದೆ.
ಹೌದು ಇದು ಅತ್ಯಂತ ಭಾರಿ ಬಜೆಟ್ ಸಿನಿಮಾ ಆಗಿದ್ದು. ಈ ಚಿತ್ರದಲ್ಲಿನ ಐದು ಪಾತ್ರಗಳಲ್ಲಿ ಎರಡು ರೋಲ್ ಗಳಲ್ಲಿ ಮಾರ್ಡ್ ನ್ ಹುಡ್ಗಿಯಾಗಿ ಕಾಣಿಸಿಕೊಳ್ತಾರಂತೆ. ಅಲ್ದೆ ಈ ರೋಲ್ ನಲ್ಲಿ ತ್ರಿಷಾ ತುಂಬಾ ಸ್ಲಿಮ್ ಆಗಿ ಕೂಡ ಕಾಣಿಸಿಕೊಳ್ತಾರಂತೆ. ಇದಕ್ಕಾಗಿ ಕೊಂಚ ವೈಟ್ ನ ಕಡಿಮೆ ಮಾಡಿಕೊಂಡು, ಮತ್ತೆ ಎಷ್ಟಿದ್ದಾರೋ ಅಷ್ಟೆ ವೈಯಿಟ್ ಗೈನ್ ಮಾಡಿಕೊಳ್ತಾರಂತೆ.
ಈ ಸಿನಿಮಾಗಾಗಿ ತ್ರಿಷಾ ಯೂಸ್ ಮಾಡೋ ಕಾಸ್ಟ್ಯೂಮ್ಸ್ ಬರೋಬ್ಬರಿ 25 ಲಕ್ಷ ಅನ್ನೋ ಟಾಕ್ ಇದೆ. ಅಲ್ದೆ ಈ ಬ್ಯೂಟಿ ಸಂಭಾವನೆ ಕೂಡ ಕೋಟಿಗಿಂತ್ಲು ಜಾಸ್ತಿಯಂತೆ. ಇನ್ನು ಈ ಚಿತ್ರದಲ್ಲಿ ನಾಜರ್ ,ಆನಂದ್ ರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ತ್ರಿಷಾ ನಟಿಸ್ತಿರೋ ಲೇಡಿ ಓರಿಯೆಂಟೆಂಡ್ ಸಿನಿಮಾ ‘ಮೋಹಿನಿ’ ಶೂಟಿಂಗ್ ಮುಗಿದ ನಂತ್ರ , ಈ ‘ಪಾಂಚ್ ಪಟಾಕಾ’ ಸಿನಿಮಾ ಆರಂಭವಾಗುತ್ತಂತೆ. ಆದ್ರೆ ತ್ರಿಷಾ ಸದ್ಯ ಚಾಲ್ತಿಯಲ್ಲಿರೋ ನಾಯಕಿಯಲ್ಲ. ಔಟ್ ಡೇಟ್ ನಾಯಕಿಯ ಲಿಸ್ಟ್ ನಲ್ಲಿರೋ ತ್ರಿಷಾಗೆ ಆಫರ್ಸ್ ಗಳು ಬರ್ತಿರೋದೆ ಗ್ರೇಟ್. ಅಂತಾದ್ರಲ್ಲಿ ತ್ರಿಷಾನ ಹಾಕ್ಕೋಂಡು ಹೈ ಬಡ್ಜೆಟ್ ಸಿನಿಮಾ ತೆಗಿದ್ರೆ ವರ್ಕ್ ಔಟ್ ಆಗುತ್ತಾ ಅಂತ ಕಾಲಿವುಡ್ ಪಂಡಿತರು ಮಾತಾನಾಡಿಕೊಳ್ತಿದ್ದಾರಂತೆ.
Comments are closed.