ಬೆಂಗಳೂರು: ಸಂಜಯನಗರದ ಅಪಾರ್ಟ್‍ಮೆಂಟ್‍ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಸುರೇಂದ್ರ ರೆಡ್ಡಿ ಸಾಮಾನ್ಯ ರಿಯಲ್ ಎಸ್ಟೇಟ್ ಉದ್ಯಮಿ ಅಗಿರಲಿಲ್ಲ. ರಿಯಲ್ ಎಸ್ಟೇಟ್, ಸೆಕ್ಯೂರಿಟಿ ಎಜೆನ್ಸಿ ಸೇರಿದಂತೆ 8 ಬಿಸಿನೆಸ್ ಗಳಲ್ಲಿ ತೊಡಗಿಸಿಕೊಂಡಿದ್ದರು.
ಆಂಧ್ರದ ಮೂಲದ ಅವಿವಾಹಿತ ಸುರೇಂದ್ರಕುಮಾರ್ ಆರ್.ಟಿ. ನಗರದಲ್ಲಿ 10 ವರ್ಷಗಳಿಂದ ವಾಸವಾಗಿದ್ದರು. 6 ತಿಂಗಳ ಹಿಂದೆ ಸಂಜಯನಗರಕ್ಕೆ ಶಿಫ್ಟ್ ಆಗಿದ್ದರು. ಕೊಲೆ ಯತ್ನ, ವಂಚನೆ ಮತ್ತು ಹೊಡೆದಾಟ ಸೇರಿದಂತೆ 12 ಪ್ರಕರಣಗಳು ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕುಟುಂಬ ದಿಂದ ದೂರಾಗಿ ಒಂಟಿಯಾಗಿದ್ದ ಸುರೇಂದ್ರ ರಡ್ಡಿ ಮನೆಯಲ್ಲಿ ನಾಲ್ವರು ಕೆಲಸಗಾರರಿದ್ದರು. ಸ್ವಂತ ಮನೆ ಇದ್ದರೂ ಸಂಜಯನಗರದ ಸುರೇಂದ್ರಕುಮಾರ್ ಅವರ ಮನೆಯನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದರು.
2007 ರಿಂದಲೂ ಆರ್‍ಟಿ ನಗರ ಠಾಣೆಯಲ್ಲಿ ಸುರೇಂದ್ರ ಕುಮಾರ್ ಮೇಲೆ ಕೇಸ್‍ಗಳು ಇವೆ. ಅಷ್ಟೇ ಅಲ್ಲದೇ ಇವರ ಮೇಲೆ ಮೇಲೆ ಸಾಕಷ್ಟು ಜನರಿಗೆ ಸೇಡು ಇತ್ತು. ಈ ಹಿಂದೆ ಕಪಿಲ್ ಸಾರಸ್ವತ್ ಎಂಬಾತನ ಜೊತೆಗೆ ಸುರೇಂದ್ರ ರೆಡ್ಡಿಗೆ ಜಗಳ ವಾಗಿತ್ತು. ಈ ಜಗಳದ ಕಾರಣದಲ್ಲಿ ಕಪಿಲ್ ಸಾರಸ್ವತ್ ಜೈಲು ಸೇರಿದ್ದ. ಕಪಿಲ್ ಸದ್ಯ ಮಥುರಾ ಜೈಲಿನಲ್ಲಿದ್ದು ಜೈಲಿನಿಂದಲೇ ಸುಪಾರಿ ಕೊಟ್ಟು ಸುರೇಂದ್ರ ರೆಡ್ಡಿ ಕೊಲ್ಲಿಸಿದ್ದಾನೆ ಎನ್ನುವ ಶಂಕೆ ಇದೆ.
ಎರಡು ತಿಂಗಳ ಹಿಂದೆ ಸುರೇಂದ್ರ ರೆಡ್ಡಿ ಆಪ್ತ ಕಾರ್ಯದರ್ಶಿ ಮತ್ತು ಮತ್ತು ಸೆಕ್ಯೂರಿಟಿ ಬದಲಿಸಿದ್ದರು. ಸುಪಾರಿ ಹಂತಕರು ಕ್ಲೋಸ್ ರೇಂಜ್ ಅಲ್ಲಿ ಇರೋವಾಗ ಡ್ರೈವರ್, ಪಿಎಸ್ ಇಬ್ಬರು ಪರಾರಿಯಾಗಿದ್ದರು. ಸಹಾಯ ಕಾರ್ಯದರ್ಶಿ ದೀಪಾಂಕರ್ ಸೈಕಿಯಾ ಸುರೇಂದ್ರ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸುವ ಬದಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಪ್ತ ಕಾರ್ಯದರ್ಶಿ ಮತ್ತು ಚಾಲಕ ಸಹಕರಿಸಿರುವ ಕುರಿತು ಪೊಲೀಸರಿಗೆ ಅನುಮಾನ ಬಂದಿದೆ.
ಜನರಿಗೆ ಗೊತ್ತೇ ಆಗಲಿಲ್ಲ: ಇಬ್ಬರು ಹಂತರು ರಾತ್ರಿ ಶೂಟ್ ಮಾಡಿದಾಗ ಅವರು ಶೂಟ್ ಮಾಡಿದ್ದಾರೆ ಎನ್ನುವುದು ಯಾರಿಗೂ ಗೊತ್ತೆ ಆಗಿಲ್ಲ. ಜನರು ಪಟಾಕಿ ಶಬ್ಧ ಎಂದು ತಿಳಿದಿದ್ದರು. ಆದರೆ ಡ್ರೈವರ್ ಕೂಗಾಟದಿಂದಾಗಿ ಜನರು ಸುರೇಂದ್ರ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಸುರೇಂದ್ರ ಕುಮಾರ್ ಜೊತೆ ನಾಲ್ವರು ಖಾಸಗಿ ಗನ್ ಮ್ಯಾನ್‍ಗಳು ಇದ್ದರು. ಆದರೆ ದೀಪಾವಳಿ ರಜೆಯ ಮೇಲೆ ಅವರು ತೆರಳಿದ್ದರು. ಸುರೇಂದ್ರ ಅವರ ಬಳಿಯೂ ಲೈಸೆನ್ಸ್ ರಿವಾಲ್ವಾರ್ ಇದ್ದು ನಿನ್ನೆ ಫುಲ್ ಲೋಡ್ ಆಗಿತ್ತು. ಆದರೆ ರಿವಾಲ್ವರ್ ಬಳಸಲು ಬಿಡದಂತೆ ಹಂತಕರು ಫುಲ್ ಕ್ಲೋಸ್ ರೇಂಜ್ ಅಲ್ಲಿ ಫೈರ್ ಮಾಡಿದ್ದಾರೆ. ಕ್ಲೋಸ್ ರೇಂಜ್ ನಲ್ಲಿ ಫೈರ್ ಮಾಡಿದ್ದರಿಂದ ಸುರೇಂದ್ರ ರಿವಲ್ವಾರ್ ತೆಗೆಯಲು ಸಾಧ್ಯವಾಗಲಿಲ್ಲ.
Comments are closed.