ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ತಡೆಯಲು ನಿನ್ನೆ ರಾತ್ರಿ ಮಾಡಿದ ದಿಢೀರ್ ಘೋಷಣೆ ಸಾಕಷ್ಟು ಜನರಿಗೆ ಗೊಂದಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಗೊಂದಲ ನಿವಾರಿಸುವ ಒಂದಷ್ಟು ಪಾಯಿಂಟ್ಸ್ ಇಲ್ಲಿವೆ.
* 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆ ಬಂದ್
* ಹಳೆಯ ನೋಟುಗಳನ್ನು ವಾಪಸ್ ಮಾಡಲು 50 ದಿನ ಸಮಯಾವಧಿ; ಡಿ.31ರವರೆಗೆ ಗಡುವು
* ಡಿ.31ರ ವಾಯಿದೆ ಮುಗಿದರೆ, ಆರ್’ಬಿಐನಲ್ಲಿ ಹಳೆಯ ನೋಟುಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯ
* ನವೆಂಬರ್ 9-10 ಬ್ಯಾಂಕು, ಪೋಸ್ಟ್ ಆಫೀಸ್, ಎಟಿಎಂ ಇವ್ಯಾವುದೂ ಇರುವುದಿಲ್ಲ
* ಆನ್’ಲೈನ್ ವಹಿವಾಟು ಮಾಡಬಹುದು; ಡೆಬಿಟ್, ಕ್ರೆಡಿಟ್ ಕಾರ್ಡಿನ ಮೂಲಕ ಟ್ರಾನ್ಸಾಕ್ಷನ್ ಮಾಡಬಹುದು.
* 2000 ಸಾವಿರ ಮುಖಬೆಲೆಯ ಹೊಸ ನೋಟುಗಳು ಮುದ್ರಣವಾಗಿವೆ. ಅವಶ್ಯಕ ಪ್ರಮಾಣದಲ್ಲಿ 100, 50, 20 ರೂ. ನೋಟುಗಳ ಮುದ್ರಣ ಮಾಡಲಾಗುತ್ತಿದೆ.
ನೀವು ಎಲ್ಲೆಲ್ಲಿ ನೋಟು ವಿನಿಯಮ ಮಾಡಿಕೊಳ್ಳಬಹುದು?
ಬ್ಯಾಂಕ್, ಪೋಸ್ಟ್ ಆಫೀಸ್, ರೇಷನ್ ಅಂಗಡಿ, ಸರ್ಕಾರಿ ಆಸ್ಪತ್ರೆ, ರೈಲ್ವೇ ಟಿಕೆಟ್ ಕೌಂಟರ್, ಏರ್ಪೋರ್ಟ್ ಟಿಕೆಟ್ ಕೌಂಟರ್, ಸರ್ಕಾರಿ ಬಸ್ ಕೌಂಟರ್, ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್, ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
ವಾಪಸ್ ಕೊಡುವಾಗ ಏನಿರಬೇಕು?
500 ಹಾಗೂ 1000 ರೂ ನೋಟು ಬದಲಾಯಿಸುವಾಗ ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್’ಪೋರ್ಟ್ ಇಟ್ಟುಕೊಳ್ಳಿ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿದರೆ ಮಾತ್ರ ಬದಲಾವಣೆ.
ಈ ಕ್ರಮ ಏಕೆ ಗೊತ್ತಾ?
ನಕಲಿ ನೋಟುಗಳು ಭಾರೀ ಪ್ರಮಾಣದಲ್ಲಿ ಭಾರತದಲ್ಲಿ ಚಲಾವಣೆಯಾಗುತ್ತಿದ್ದವು. ಪ್ರತಿ 10 ಲಕ್ಷ ನೋಟುಗಳಲ್ಲಿ 250 ಖೋಟಾ ನೋಟು. ಬ್ಯಾಂಕ್’ಗಳಲ್ಲೇ 400 ಕೋಟಿ ರೂ. ಖೋಟಾನೋಟುಗಳಿವೆ. ಇಂತಹ ನಕಲಿ ನೋಟುಗಳಲ್ಲಿ ಶೇ.76ಷ್ಟು ಪ್ರಮಾಣವು 500 ರೂ. ಮುಖಬೆಲೆಯ ಕರೆನ್ಸಿಗಳೇ ಇವೆ. ಹೀಗಾಗಿ, 500 ರೂ. ಕರೆನ್ಸಿಯನ್ನೇ ರದ್ದು ಮಾಡಲಾಗಿದೆ.
ಹೇಗಿತ್ತು ಗೊತ್ತಾ ಪ್ಲಾನ್?
* ಸ್ವಯಂಘೋಷಿತ ಆಸ್ತಿ ತೆರಿಗೆ ಘೋಷಣೆ ಮೂಲಕ ಮೊದಲು ಕಪ್ಪು ಹಣ ಘೋಷಣೆಗೆ ಜೂನ್ 1ರಿಂದ ಸೆ.30ರವರೆಗೆ ಅವಕಾಶ ನೀಡಲಾಗಿತ್ತು; ಈ ಕ್ರಮದಿಂದ 65 ಸಾವಿರ ಕೋಟಿ ಕಪ್ಪುಹಣ ಘೋಷಣೆಯಾಯ್ತು.
* ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್’ನ ಸುಳಿವು ಮುಂಚೆಯೇ ಸಿಕ್ಕಿತ್ತಾದರೂ ಅದು ಇಷ್ಟು ಬೇಗ ನಡೆಯಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಬ್ಲ್ಯಾಕ್ ಮನಿ ಇಟ್ಟುಕೊಂಡವರಿಗೆ ಶಾಕ್ ಕೊಟ್ಟ ಸ್ಟ್ರೈಕ್ ಇದು.
Comments are closed.