ಬೆಂಗಳೂರು: 500 ಹಾಗೂ 1 ಸಾವಿರ ರೂ ಮುಖಬೆಲೆಯ ನೋಟುಗಳನ್ನ ನಿಷೇಧಿಸಿದ ಪ್ರಧಾನಿ ಮೋದಿ ನಿರ್ಧಾರಕ್ಕೆ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಮೋದಿ ಶಾಕ್ ಕೊಟ್ಟಿದ್ದಾರೆ ಎಂದಿದ್ದಾರೆ.
ಜನಸಾಮಾನ್ಯರು ಏನೂ ಎಟಿಎಂ ಇಟ್ಟುಕೊಂಡಿರಲ್ಲ. ನಿನ್ನೆ ಚನ್ನಪಟ್ಟಣ ಸಮೀಪ ಹೊಟೇಲ್ ಗಳಲ್ಲಿ ಊಟ ಕೊಡುತ್ತಿರಲಿಲ್ಲ. ನಾನೂ ಕೂಡ ಮನೆಯಲ್ಲಿ ಹುಡುಕಿ ನೂರು ರೂಪಾಯಿಗಳನ್ನು ತಂದು ನಮ್ಮ ಡ್ರೈವರ್ ಗಳಿಗೆ ಕೊಡುತ್ತಿದ್ದೇನೆ ಅಂತಾ 100 ರೂ ನೋಟುಗಳನ್ನ ಪ್ರದರ್ಶಿಸಿದ್ರು. ಯಾವ ಜನ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಅಂದ್ರು.
ಸಿಎಂ ಸಿದ್ದರಾಮಯ್ಯ ಕೂಡ ನೋಟು ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಕೊಂಚ ನೆಗೆಟಿವ್ ರಿಯಾಕ್ಷನ್ ನೀಡಿದ್ರು. ಸಮಯ ಕೊಟ್ಟು ನೋಟು ಬದಲಾವಣೆಗೆ ಮುಂದಾಗಿದ್ರೆ ಒಳ್ಳೇದಾಗ್ತಿತ್ತು. ಏಕಾಏಕಿ ನಿರ್ಧಾರದಿಂದ ದೈನಂದಿನ ಜನ ಜೀವನಕ್ಕೆ ಕೊಂಚ ಧಕ್ಕೆ ಆಗಿದೆ. ಕೇಂದ್ರದ ಈ ನಡೆ ಕಪ್ಪು ಹಣ ಇದ್ದವರಿಗೆ ಸಮಸ್ಯೆ ತಂದೊಡ್ಡುತ್ತದೆಯೇ ಹೊರತು ವೈಟ್ ಮನಿ ಇಟ್ಟವರಿಗೆ ಏನೂ ಆಗಲ್ಲ ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಹಾಗೇ ಸರ್ಕಾರದ ನಡೆ ಬಗ್ಗೆ ಎಂದಿನಂತೆ ತಮ್ಮದೇ ಧಾಟಿಯಲ್ಲಿ ಮಾತನಾಡಿದ ಸಿಎಂ, ಸೆಂಟ್ರಲ್ನವರು ನಮಗೆ ಹೇಳಿ ಹಣ ಬದಲಾವಣೆ ಮಾಡ್ತಾರಾ? ಅವರ ಅಧೀನದ ಇಲಾಖೆ, ಅವರಿಗೆ ಬೇಕಾದಾಗ ಮಾಡಿಕೊಳ್ತಾರೆ ಅಂತ ಹೇಳಿದ್ರು.
ಗೃಹಸಚಿವ ಪರಮೇಶ್ವರ್ ಮಾತನಾಡಿ, ಕೇಂದ್ರ ಸರ್ಕಾರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿಯೇ ನಿರ್ಧಾರ ಮಾಡಿರುತ್ತಾರೆ. ಕಪ್ಪು ಹಣ ತಡೆಗೆ ಈ ನಿರ್ಧಾರ ಮಾಡಿರಬಹುದು. ಆದರೆ, ಇದರ ನಂತರದ ಪರಿಣಾಮದ ಬಗ್ಗೆ ಪರಿಶೀಲಿಸಬೇಕು. ಮಧ್ಯಮ ವರ್ಗದವರಿಗೆ ತಕ್ಷಣ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆ ಆಗಬಹುದು ಅಂದ್ರು.
ನಮ್ಮ ಪಕ್ಷ ಮೊದಲಿನಿಂದ ಹೇಳುತ್ತಿದ್ದುದು ಹೊರದೇಶದಲ್ಲಿರುವ ಕಪ್ಪು ಹಣ ವಾಪಸ್ ತನ್ನಿ ಅಂತಾ. ಆದರೆ ಮೋದಿ ಈಗ ಈ ನಿರ್ಧಾರ ಪ್ರಕಟಿಸಿದ್ದಾರೆ. ದೇಶದೊಳಗಿನ ಕಪ್ಪು ಹಣದ ವಿರುದ್ದ ನಾವೂ ಮೊದಲಿನಿಂದ ಮಾತನಾಡುತ್ತಿದ್ದೆವು ಅಂತ ಪರಮೇಶ್ವರ್ ಹೇಳಿದ್ರು.
Comments are closed.