ಬೆಂಗಳೂರು: ಭಾರತ ಸರ್ಕಾರದ ಇಂದಿನ ಭಾಷಾನೀತಿಯು ಕನ್ನಡಿಗರ ಭಾಷಿಕ ಹಕ್ಕುಗಳನ್ನು ಹೇಗೆ ಕಡೆಗಣಿಸಲಾಗುತ್ತಿದೆ ಎಂಬುದನ್ನು ಬನವಾಸಿ ಬಳಗ ಪ್ರಕಾಶನವು ವಿಡಿಯೊ ಮೂಲಕ ಪ್ರಸ್ತುತಪಡಿಸಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಡಿಯೊವನ್ನು ಬನವಾಸಿ ಬಳಗ ಪ್ರಕಾಶನ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದೆ.
ಕರ್ನಾಟಕದ ಏಕೀಕರಣವನ್ನು ಹೆಮ್ಮೆಯಿಂದ ಸ್ಮರಿಸುವ ಈ ದಿನದಂದು, ಕನ್ನಡಿಗರನ್ನು ಬಾಧಿಸುತ್ತಿರುವ ವ್ಯವಸ್ಥೆಗಳನ್ನು ಪ್ರಶ್ನಿಸುವ ಕೆಲಸವೂ ಆಗಬೇಕಿದೆ. ಕನ್ನಡಿಗರಿಗೆ ಸಹಜವಾಗಿ ದಕ್ಕಬೇಕಿದ್ದ ಭಾಷಿಕ ಹಕ್ಕುಗಳನ್ನು ಹೇಗೆ ಕಡೆಗಣಿಸಲಾಗುತ್ತಿದೆ ಎಂಬ ಬಗ್ಗೆ ಹೆಚ್ಚೆಚ್ಚು ಕನ್ನಡಿಗರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ವಿಡಿಯೊ ಮಾಡಲಾಗಿದೆ.
ಭಾರತ ಸರ್ಕಾರದ ಇವತ್ತಿನ ಭಾಷಾನೀತಿಯು ಕನ್ನಡಿಗರ ಕೆಲಸಗಳಿಗೆ ಹೇಗೆ ಕುತ್ತು ತರುತ್ತಿದೆ, ಮತ್ತು ಅನಿಯಂತ್ರಿತ ವಲಸೆಯು ನಮ್ಮನ್ನು ರಾಜಕೀಯವಾಗಿ ಬಲಹೀನರನ್ನಾಗಿ ಹೇಗೆ ಮಾಡುತ್ತಿದೆ ಎಂಬುದನ್ನೂ ಬಣ್ಣಿಸುವ ವಿಡಿಯೊ ಇದಾಗಿದೆ.
Comments are closed.