ಕರ್ನಾಟಕ

ಈ ಐವರು ಕುಖ್ಯಾತ ಕಳ್ಳರು ಸರಗಳ್ಳತನ ಮಾಡುತ್ತಿದ್ದುದು ಏಕೆ ಗೊತ್ತಾ..?

Pinterest LinkedIn Tumblr

kal

ಬೆಂಗಳೂರು: ಮೋಜಿನ ಜೀವನವನ್ನು ನಡೆಸಲು ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ ಐವರು ಕುಖ್ಯಾತ ಸರಗಳ್ಳರನ್ನು ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು 2 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಚೋಳೂರುಪಾಳ್ಯದ ಪ್ರಶಾಂತ್.ಎಸ್ ಅಲಿಯಾಸ್ ಪಿಚ್ಚಿಕೆ(೧೯)ಕೆ.ಪಿ.ಅಗ್ರಹಾರದ ವಿನೋದ್‌ರಾವ್.ಕೆ ಅಲಿಯಾಸ್ ವಿನೋದ್(೨೨),ಅರುಣ್‌ರಾಜ್.ಆರ್ ಅಲಿಯಾಸ್ ಅರುಣ್(೨೨) ಉದಯ್‌ಕುಮಾರ್ ಅಲಿಯಾಸ್ ಡೇವಿಡ್(೩೦)ಹಾಗೂ ಹೆಣ್ಣೂರು ಕ್ರಾಸ್‌ನ ಕಾರ್ತೀಕ್(೨೩)ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 2ಲಕ್ಷ 80 ಸಾವಿರ ಮೌಲ್ಯದ 105 ಗ್ರಾಂ ತೂಕದ 3 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಲಯ ಡಿಸಿಪಿ ಅನುಚೇತ್ ಅವರು ತಿಳಿಸಿದ್ದಾರೆ.

ಆರೋಪಿಗಳಾದ ಪ್ರಶಾಂತ್ ಹಾಗೂ ವಿನೋದ್‌ರಾವ್ ಮತ್ತೊಬ್ಬ ಆರೋಪಿಯಾದ ಕಾರ್ತೀಕ್‌ನ ಬಜಾಜ್ ಪಲ್ಸರ್ ಬೈಕ್ ಪಡೆದು ನಗರದ ವಿವಿದೆಢೆ ಸುತ್ತಾಡಿ ರಸ್ತೆ, ಪಾರ್ಕ್‌ಗಳ ಬಳಿ ಓಡಾಡುವ ಒಂಟಿ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗುತ್ತಿದ್ದರು.

ಕಸಿದ ಚಿನ್ನದ ಸರವನ್ನು ಸ್ನೇಹಿತರಮೂಲಕ ಗಿರಿವಿ ಇಲ್ಲವೆ ಮಾರಾಟ ಮಾಡಿ ಬಂದ ಹಣದಿಂದ ಮೋಜಿನ ಜೀವನವನ್ನು ನಡೆಸುತ್ತಿದ್ದರು ಆರೋಪಿಗಳ ಬಂಧನದಿಂದ ಮಹಾಲಕ್ಷ್ಮಿಲೇಔಟ್, ರಾಮಮೂರ್ತಿನಗರ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಪ್ರಕರಣಗಳು ಪತ್ತೆಯಾಗಿವೆ ಆರೋಪಿಗಳಾದ ಪ್ರಶಾಂತ್ ಮತ್ತು ಅರುಣ್‌ರಾಜ್ ಹಿಂದೆಯೂ ಸಹ ವಿಜಯನಗರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಮತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ಮತ್ತೆ ಸರಕಳವು ಕೃತ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ. ಮಾಗಡಿರಸ್ತೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಮಂಜುನಾಥ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Comments are closed.