ಕರ್ನಾಟಕ

ಮಹಿಳೆಯಿಂದ 8 ಲಕ್ಷ ದೋಚಿದ್ದ ಇಬ್ಬರು ಪೊಲೀಸರ ಅಮಾನತು

Pinterest LinkedIn Tumblr

crimeಬೆಂಗಳೂರು(ಡಿ.4): ಆರಕ್ಷಕರೆ ದರೋಡೆ ಮಾಡಿದ ಘಟನೆ ಗಿರಿನಗರದಲ್ಲಿ ನಡೆದಿದೆ. ಗಿರಿನಗರ ಪೊಲೀಸ್ ಪೇದೆಗಳಾದ ರಘು ಮತ್ತು ಮಯೂರ್ 2 ದಿನಗಳ ಹಿಂದೆ ಗಿರಿನಗರದ ಸೀತಾ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುವ ನೆಪದಲ್ಲಿ ವಕೀಲೆ ಸುಕನ್ಯಾ ಎಂಬ ಮಹಿಳೆಯಿಂದ 8 ಲಕ್ಷರೂ. ದರೋಡೆ ಮಾಡಿದ್ದರು.

ಸುಕನ್ಯ ಸ್ನೇಹಿತನಿಗೆ ಹಣ ನೀಡಲು ಹೊರಟಿದ್ದರು. ಈ ಬಗ್ಗೆ ಸುಕನ್ಯ ಅವರು ಡಿಸಿಪಿ ಅವರಿಗೆ ದೂರು ನೀಡಿದ್ದರು. ಘಟನೆಯ ನಂತರ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಈ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ದರೋಡೆ ಮಾಡಿದ ನೋಟುಗಳೆಲ್ಲವೂ ಹಳೆಯ ನೋಟುಗಳಾಗಿದ್ದವು.

Comments are closed.