ಹಾಸನ: ನಗರದ ಸಂತೆಪೇಟೆ ಕಸದ ತೊಟ್ಟಿ ಬಳಿ ರದ್ದಾಗಿರುವ 500 ರೂ. ಮುಖಬೆಲೆಯ ನೋಟುಗಳ ಬಂಡಲ್ಗಳಿಗೆ ಬೆಂಕಿ ಹಾಕಲಾಗಿದೆ. ಕಸದ ಜತೆ ಜೊತೆಯಲ್ಲೇ ನೋಟುಗಳನ್ನು ಸುರಿದು ಬೆಂಕಿ ಹಾಕಿ ಸುಟ್ಟಿರುವುದು ಶನಿವಾರ ಮುಂಜಾನೆ ಗೊತ್ತಾಗಿದೆ.
ನೋಟುಗಳು ಉರಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಬೆಂಕಿ ಆರಿಸಿ ನೋಟುಗಳನ್ನು ಆಯ್ದುಕೊಳ್ಳಲು ಯತ್ನಿಸಿದರು. ಕಾಳ ಧನಿಕರು ನೋಟು ಚಲಾವಣೆ ಮಾಡಲು ಸಾಧ್ಯವಾಗದೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನೋಟು ಸುರಿದಿರುವವರ ವಿರುದ್ಧ ಕ್ರಮಕ್ಕಾಗಿ ತನಿಖೆ ನಡೆಸುವುದಾಗಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಪ್ರಕರಣದ ಬೆನ್ನಲ್ಲೇ ಹಾಸದಲ್ಲಿ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಇನ್ನಷ್ಟು ಕುತೂಹಲ ಮೂಡುವಂತೆ ಮಾಡಿದೆ.
Comments are closed.