ಬಾಗಲಕೋಟೆ: ಕ್ರೂಸರ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹುಬ್ಬಳ್ಳಿ ಮಾದಿಗ ಸಮಾವೇಶಕ್ಕೆ ಹೊರಟಿದ್ದ 5 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಎಂಟು ಜನ ಗಂಭೀರವಾಗಿ ಗಾಯಗೊಂಡ ಘಟನೆ ಕುಳಗೇರಿ ಕ್ರಾಸ್‌ನಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಭಾನುವಾರ ಬೆಳಿಗ್ಗೆ ದುರ್ಘಟನೆ ಸಂಭವಿಸಿದೆ. ಮೃತರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದವರೆಂದು ತಿಳಿದುಬಂದಿದೆ.
ನಸುಕಿನಲ್ಲಿ ಬಸವನಬಾಗೇವಾಡಿಯಿಂದ ಹೊರಟಿದ್ದು, ಬೆಳಿಗ್ಗೆ 9:30ರ ವೇಳೆ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ನುಜ್ಜುಗುಜ್ಜಾಗಿ ರಸ್ತೆ ಪಕ್ಕಕ್ಕೆ ಉರುಳಿದೆ. ಬಸವರಾಜ ಮ್ಯಾಗೇರಿ (45), ಭೀಮಣ್ಣ ಕಳ್ಳಿಮನಿ (56), ಬಾಬು ಕಲ್ಯಾಣಿ (48), ಎಸ್.ಎಸ್.ಮ್ಯಾಗೇರಿ ಮೃತಪಟ್ಟವರು. ಮೃತಪಟ್ಟ ಇನ್ನಿಬ್ಬರು ಹಾಗೂ ಗಾಯಾಳುಗಳ ವಿವರ ತಿಳಿದುಬಂದಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.