ಕರ್ನಾಟಕ

ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ವಿರುದ್ಧ ಅತ್ಯಾಚಾರದ ದೂರು

Pinterest LinkedIn Tumblr

23

ಬೆಂಗಳೂರು: ಜ್ಯೋತಿಷಿ ಆರ್ಯವರ್ಧವ್ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನ ಮಹಿಳೆಯೊಬ್ಬರು ಆರ್ಯವರ್ಧನ್ ಗುರೂಜಿ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನನ್ವಯ ಅತ್ಯಾಚಾರ ಯತ್ನ, ವಂಚನೆ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣದಡಿ ಗುರೂಜಿ ವಿರುದ್ಧ ಎಫ್‌ಐಆರ್‌  ದಾಖಲಿಸಿಕೊಳ್ಳಲಾಗಿದೆ. ಸಂಖ್ಯಾ ಜ್ಯೋತಿಷ್ಯ ತರಗತಿ ನಡೆಸುವುದಾಗಿ ಆರ್ಯವರ್ಧನ್‌ ಅವರು ಕೆಲ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದರು. ಅದನ್ನು ನಂಬಿದ್ದ 40 ವರ್ಷದ ಮಹಿಳೆಯು ತರಗತಿಗೆ ಬಂದಿದ್ದರು ಎಂದು ವಿವರಿಸಿದರು.

ಐದು ದಿನಗಳ ತರಗತಿ ಪ್ರವೇಶಾತಿಗೆ 24 ಸಾವಿರ ನಿಗದಿ ಮಾಡಲಾಗಿತ್ತು. ಆದರೆ, ಹೆಚ್ಚು ತರಗತಿಗಳನ್ನು ನಡೆಸುವುದಾಗಿ ಗುರೂಜಿ 1.5 ಲಕ್ಷ ಪಡೆದುಕೊಂಡಿದ್ದರು. ತಮ್ಮ ತರಬೇತಿಯಿಂದ ಉಪಯೋಗವಾಗದಿದ್ದರೇ ಹಣ ವಾಪಸ್ ಮಾಡುವುದಾಗಿ ಗುರೂಜಿ ಹೇಳಿದ್ದರು. ಕೆಲವು ತರಗತಿಗಳಿಗೆ ಹಾಜರಾಗಿದ್ದ ಆಕೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದು ಭಾವಿಸಿ ಹಣ ವಾಪಸ್ ನೀಡುವಂತೆ ಕೇಳಿದ್ದಳು. ಈ ಸಂಬಂಧ ಇಬ್ಬರ ನಡುವೆ ವಾಗ್ದಾಳಿ ನಡೆದಿತ್ತು.

ಆಗಸ್ಟ್ 11 ರಂದು ಮಹಿಳೆ ಮತ್ತು ಆಕೆಯ ಪತಿ ರಾಜರಾಜೇಶ್ವರಿ ನಗರದಲ್ಲಿರುವ ಆರ್ಯವರ್ಧನ್ ಅವರ ಮನೆಗೆ ತೆರಳಿ ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿ , ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.