ಬೆಂಗಳೂರು(ಡಿ.21): ಇನ್ನು ಮುಂದೆ ಸಂಬಳವನ್ನು ಕ್ಯಾಷ್ ಮೂಲಕ ಕೊಡುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದೇಶದ ಹಲವಾರು ಫ್ಯಾಕ್ಟರಿಗಳಲ್ಲಿ ಈಗಲೂ ಕೂಡಾ ಕಾರ್ಮಿಕರಿಗೆ ನಗದಿನಲ್ಲೇ ಸಂಬಳ ನೀಡುತ್ತಿವೆ. ಇದನ್ನು ಪಾರದರ್ಶಕವಾಗಿಸಲು ಹಾಗೂ ಕಾರ್ಮಿಕರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಂಬಳವನ್ನು ಕಾರ್ಖಾನೆ, ಎಸ್ಟೇಟ್ ಗಳ ಮಾಲೀಕರು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೇ ಹಾಕಬೇಕು ಅಥವಾ ಚೆಕ್ನಲ್ಲಿ ನೀಡಬೇಕು. ಸದ್ಯಕ್ಕೆ ಕಾನೂನಿನಲ್ಲಿ ಇದನ್ನು ಕಡ್ಡಾಯ ಮಾಡಲು ಅವಕಾಶವಿಲ್ಲ. ಹೀಗಾಗಿ ಈ ಕುರಿತು ಮೊದಲು ಸುಗ್ರೀವಾಜ್ಞೆ ಹೊರಡಿಸಿ, ನಂತರ ಮಸೂದೆ ಅಂಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾಷ್ಲೆಸ್ ವಹಿವಾಟಿಗೆ ಮುಂದಾಗಿರುವ ಸರ್ಕಾರ, ಕಾರ್ಮಿಕರ ಹಿತರಕ್ಷಣೆಗೆ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಕರ್ನಾಟಕ
Comments are closed.