ಬೆಂಗಳೂರು(ಡಿ.21); ರಾಜ್ಯ ಸರ್ಕಾರದ ಸಚಿವರ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 3 ಲಕ್ಷ ಕೋಟಿ ವಿವಿಧ ಬ್ಯಾಂಕ್ಗಳಲ್ಲಿ ಡಿಪಾಸಿಟ್ ಆಗಿದೆ. ಆ 3 ಲಕ್ಷ ಕೋಟಿ ಯಾರದ್ದು? ಎಲ್ಲಿಂದ ಬಂತು? ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದಿದ್ದಾರೆ.
ಶೀಘ್ರ ಮೂವರು ಸಚಿವರು ರಾಜೀನಾಮೆ ಕೊಡಬೇಕೆಂದು ಹೇಳಿದ್ದ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಸಿಬಿಐ, ಇಡಿ, ಐಟಿ ಮಾಹಿತಿ ಬಿಜೆಪಿ ನಾಯಕರಿಗೆ ಹೇಗೆ ಗೊತ್ತಾಗುತ್ತೆ? ಸಿಬಿಐ ಅಧಿಕಾರಿಗಳು ದಾಳಿ ಮಾಡುತ್ತಾರೆಂದು ಬಿಎಸ್ವೈ ಹೇಳುತ್ತಿದ್ದಾರೆ. ಬಿಎಸ್`ವೈಗೆ ಈ ಎಲ್ಲ ವಿಚಾರ ಹೇಗೆ ಗೊತ್ತಿದೆ. ಸಿಬಿಐ ಅಧಿಕಾರಿಗಳು ಪಾರದರ್ಶಕವಾಗಿದ್ದರೆ ಮೊದಲು ಬಿಎಸ್`ವೈ ಅವರನ್ನ ಬಂಧಿಸಬೇಕು. ನಿಮಗೆ ಎಲ್ಲಿಂದ ಮಾಹಿತಿ ಬರುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ.
ಬಿಜೆಪಿ ನಾಯಕರು ಶಾಮೀಲಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವಂತ ಪ್ರಯತ್ನ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳ ಜೊತೆ ಬಿಎಸೈ ಗೆ ಒಳ್ಳೇ ಸಂಬಂಧ ಇದೆ. ಬಿಎಸ್`ವೈ ಕಿಕ್ ಬ್ಯಾಕ್ ಪ್ರಕರಣದಲ್ಲಿ ಖುಲಾಸೆಯಾಗಿದ್ದರು. ಕಾಂಗ್ರೆಸ್ ಸರ್ಕಾರವನ್ನ ಸಿಬಿಐ ಟಾರ್ಗೆಟ್ ಮಾಡುತ್ತಿದೆ, ಬಿಜೆಪಿ ಇರುವ ರಾಜ್ಯಗಳಲ್ಲಿ ಎಲ್ಲೂ ದಾಳಿಯಾಗಿಲ್ಲ. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಮೇಲೆ ಈ ರೀತಿಯ ಆರೋಪ ಮಾಡಲಾಗುತ್ತಿದೆ. ಮೊದಲು ಬಿಎಎಸ್`ವೈ ಅವರನ್ನ ಬಂಧಿಸಬೇಕೆಂದು ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡುರಾವ್ ಆಗ್ರಹಿಸಿದ್ಧಾರೆ.
ಕರ್ನಾಟಕ
Comments are closed.