ಬೆಂಗಳೂರು(ಜ.06): ಓದಿನ ಕಡೆಗೆ ಗಮನ ಹರಿಸಿ ಚೆಂದದ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಯುವಕರು ಈಗ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆತಂಕದ ವಿಚಾರ ಅಂದರೆ ಕೊಲೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ 17 ರಿಂದ 23 ಆಸುಪಾಸಿನ ಯುವಕರು ಭಾಗಿಯಾಗುತ್ತಿದ್ದಾರೆ.
ಯುವ ಸಮೂಹ ಹೀನಾತಿ ಹೀನ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಯೌವ್ವನಾವಸ್ಥೆ ಎಂದರೆ 16 ವರ್ಷದಿಂದ 23 ವರ್ಷದೊಳಗಿನ ವಯಸ್ಸಲ್ಲಿ ಯುವಕರು ಓದಿನ ಕಡೆಗೆ ಗಮನ ಹರಿಸುತ್ತಿಲ್ಲ. ಬದಲಾಗಿ, ತಮ್ಮ ವೃತ್ತಿ ಜೀವನದ ಕಡೆಗೆ ಗಮನ ಕೊಡದೆ ಸಮಾಜಘಾತುಕರಾಗಿ ಬೆಳೆಯುತ್ತಿದ್ದಾರೆ.
ದಾರಿ ತಪ್ಪಿದ ಹುಡುಗರು
– ಕಮ್ಮನಹಳ್ಳಿಯಲ್ಲಿ ಯುವತಿಯನ್ನು ಅಪ್ಪಿ ಹಿಂಸಿಸಿದ ಕಾಮುಕರ ವಯಸ್ಸು 18-23
– ಚೆನ್ನಮ್ಮನಕೆರೆಯಲ್ಲಿ ಯುವತಿಯನ್ನು ಎತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದವನ ವಯಸ್ಸು 23
– 2015ರಲ್ಲಿ ಮಡಿವಾಳ ಬಿಪಿಓ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದವರ ವಯಸ್ಸು 20
– 2014ರಲ್ಲಿ ಫ್ರೇಜರ್ ಟೌನ್ ಗ್ಯಾಂಗ್ರೇಪ್ ಕೇಸಿನ ಪ್ರಮುಖ ಆರೋಪಿ ನಾಸಿರ್ ಹೈದರ್ ವಯಸ್ಸು 23
– 2012ರಲ್ಲಿ ಬೆಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರಗೈದವರ ವಯಸ್ಸು 17-25
– 2011ರಲ್ಲಿ ಶಾಂತಿನಗರ ಸ್ಮಶಾನದಲ್ಲಿ ನಡೆದಿದ್ದ ಅತ್ಯಾಚಾರದ 11 ಆರೋಪಿಗಳ ವಯಸ್ಸು 18-23
ಅತ್ಯಾಚಾರ ಪ್ರಕರಣಳು ಮಾತ್ರವಲ್ಲ, ನಡುರಸ್ತೆಯಲ್ಲಿ ಸಿಕ್ಕ ಒಂಟಿ ಯುವತಿಯರನ್ನು ಮಹಿಳೆಯರ ಜತೆ ಅಸಭ್ಯ ವರ್ತನೆ. ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಭಾಗಿಯಾದವರಲ್ಲಿ ಯುವಕರ ಸಂಖ್ಯೆಯೇ ಅಧಿಕ. ಗಂಭೀರ ವಿಚಾರ ಅಂದ್ರೆ ಕಾಲೇಜು ವಿದ್ಯಾರ್ಥಿಗಳು ಈ ರೀತಿಯ ಕೃತ್ಯಗಳಲ್ಲಿ ಹೆಚ್ಚೆಚ್ಚು ಭಾಗಿಯಾಗುತ್ತಿರುವುದು. ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.
ವರ್ಷ
ಲೈಂಗಿಕ ದೌರ್ಜನ್ಯ
ಅತ್ಯಾಚಾರ
ಪೋಕ್ಸೋ ಪ್ರಕರಣ
2014-
690
112
302
2015-
714
114
276
2016-
756
96
280
2014, 15 ಮತ್ತು 2016.. ಈ ಮೂರು ವರ್ಷಗಳಲ್ಲಿ 3340 ಲೈಂಗಿಕ ದೌರ್ಜನ್ಯ ಪ್ರಕರಣಗಳು ನಗರದಲ್ಲಿ ದಾಖಲಾಗಿದ್ದು, ಇದರಲ್ಲಿ 2160 ಲೈಂಗಿಕ ದೌರ್ಜನ್ಯ, 322 ಅತ್ಯಾಚಾರ ಮತ್ತು 858 ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಆತಂಕದ ವಿಚಾರ ಅಂದರೆ ಈ ಹೀನ ಪ್ರಕರಣಗಳಲ್ಲಿ ಭಾಗಿಯಾದ ಶೇ 70 ರಷ್ಟು ಆರೋಪಿಗಳ ವಯಸ್ಸು 17 ರಿಂದ 23. ಅಂದರೆ ನಮ್ಮ ಯುವ ಸಮೂಹ ಸಾಗುತ್ತಿರುವ ದಾರಿ ಯಾವುದು.
ಕರ್ನಾಟಕ
Comments are closed.