ಕರ್ನಾಟಕ

ಕೆಜಿ ಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಕೃತ್ಯ ಎಸಗಿದ ಯುವತಿಯ ಭಾವ ಬಂಧನ

Pinterest LinkedIn Tumblr

ಬೆಂಗಳೂರು: ಕೆಜಿ ಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಜಿ ಹಳ್ಳಿ ಪೊಲೀಸರು ಅರೋಪಿ ಇರ್ಷಾದ್‍ನನ್ನು ಗೋವಿಂದಪುರದಲ್ಲಿ ಬಂಧಿಸಿದ್ದಾರೆ. ಆರೋಪಿ ಹಾಕಿದ್ದ ಪುಲ್‍ಓವರ್‍ನಿಂದ ಯುವತಿ ಮತ್ತು ಪೋಷಕರು ಇರ್ಷಾದ್‍ನ ಗುರುತು ಪತ್ತೆ ಹಚ್ಚಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರೋ ಕೆಜಿ ಹಳ್ಳಿ ಪೊಲಸರು ವಿಚಾರಣೆ ಮುಂದುವರೆಸಿದ್ದಾರೆ.

ಯುವತಿಯ ಭಾವನಿಂದಲೇ ಕೃತ್ಯ: ಯುವತಿಯ ಭಾವನಾಗಿರೋ ಆರೋಪಿ ಇರ್ಷಾದ್ ಆಕೆಯನ್ನು ಪ್ರೀತಿಸುತ್ತಿದ್ದ. ನಾದಿನಿಯನ್ನ ಬೇರೆ ಯಾರೂ ಮದುವೆಯಾಗಬಾರದು ಎಂದು ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಮೊದಲೇ ಮದುವೆಯಾಗಿರೋ ಇರ್ಷಾದ್ ಯುವತಿಗೆ ಮುತ್ತು ಕೊಟ್ಟರೆ ಯಾರು ಮದುವೆಯಾಗಲ್ಲ. ನಂತರ ತಾನೇ ಮದುವೆಯಾಗಬಹುದು ಎಂದು ಈ ರೀತಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.

ಹೆಂಡತಿಯ ಮನವೊಲಿಸಲು ಕೃತ್ಯ: ನಾದಿನಿಯ ಮೇಲೆ ಮೊದಲಿಂದಲೂ ಆಸೆ ಹೊಂದಿದ್ದ ಇರ್ಷದ್ ಹೆಂಡತಿಯನ್ನು ಒಪ್ಪಿಸೋದಕ್ಕೆ ಭಯ ಪಡ್ತಿದ್ದ. ಯುವತಿಗೆ ಕೆಟ್ಟ ಹೆಸರು ಬಂದ್ರೆ ಹೆಂಡತಿ ಮನವೊಲಿಸಿ ಮದುವೆ ಆಗಬಹುದು ಅಂದುಕೊಂಡಿದ್ದ.

ಸಿಸಿಟಿವಿ ಇರೋದು ನೋಡಿಯೇ ಮುತ್ತಿಟ್ಟ: ಯುವತಿಯನ್ನು ವಿನೋಬಾ ನಗರದಿಂದ ತನ್ನ ಮನೆಗೆ ಕರೆದುಕೊಂಡು ಬಂದ ಇರ್ಷದ್ ಬಳಿಕ ಆಕೆ ಆಫೀಸಿಗೆ ತೆರಳುವ ಮುಂಚೆಯೇ ರಸ್ತೆಯಲ್ಲಿ ಕಾದಿದ್ದ. ಸಿಸಿಟಿವಿ ಇರುವುದನ್ನು ಪ್ರಮುಖವಾಗಿ ಗಮನಿಸಿ ಮುತ್ತಿಟ್ಟು ಓಡಿದ್ದ. ಯುವತಿ ಘಟನೆಯ ಬಗ್ಗೆ ಹೇಳಿದ ಬಳಿಕ ಅವನೇ ಸಿಸಿಟಿವಿ ಇದೆ ಎಂದು ಹೇಳಿ ದೃಶ್ಯಾವಳಿ ತೆಗೆದು ಲೀಕ್ ಮಾಡಿ, ಪೊಲೀಸರಿಗೆ ದೂರು ನೀಡಲು ಬಂದಿದ್ದ.

Comments are closed.