ಕರ್ನಾಟಕ

ಸದನ ಸಮಿತಿ ವರದಿ ಕನ್ನಡದಲ್ಲಿದೆ. ನನಗೆ ಓದಲು ಕಷ್ಟ: ಅಶೋಕ್ ಖೇಣಿ

Pinterest LinkedIn Tumblr


ಬೆಂಗಳೂರು(ಜ. 17): ನೈಸ್ ಅಕ್ರಮಗಳ ಕುರಿತು ತನಿಖೆ ನಡೆಸಿದ ಸದನ ಸಮಿತಿಯು ವಿಧಾನಸಭೆಯಲ್ಲಿ ಮಂಡನೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕೋರಿದ ಮಾಧ್ಯಮಗಳಿಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಉಡಾಫೆ ಉತ್ತರ ನೀಡಿದ್ದಾರೆ. ಸಮಿತಿಯ ವರದಿಯನ್ನೇ ನಾ ನೋಡಿಲ್ಲ. ಅದರ ಬಗ್ಗೆ ಗೊತ್ತೇ ಇಲ್ಲ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಖೇಣಿ ಪ್ರತಿಕ್ರಿಯಿಸಿದ್ದಾರೆ.
ಸದನ ಸಮಿತಿ ವರದಿ ಕನ್ನಡದಲ್ಲಿದೆ. ನನಗೆ ಓದಲು ಕಷ್ಟವಾಗುತ್ತದೆ ಎಂದು ಅಶೋಕ್ ಖೇಣಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಬಂದಿದೆಯಲ್ಲಾ ಎಂದು ಕೇಳಿದ್ದಕ್ಕೆ, ಪೇಪರ್’ನಲ್ಲಿ ಬಂದಿರೋದನ್ನೆಲ್ಲಾ ತಾನು ನಂಬಲ್ಲ. ಪೇಪರ್’ನಲ್ಲಿ ಬರೆದಿರುವವರೆಲ್ಲಾ ಸತ್ಯ ಹರಿಶ್ಚಂದ್ರರಾ? ಎಂದು ಅವರು ಉಡಾಫೆಯಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಪಕ್ಕದಲ್ಲಿದ್ದ ಜೆಡಿಎಸ್ ಶಾಸಕ ಸಾರಾ ಮಹೇಶ್ ಕೂಡ ತಾನು ಪತ್ರಿಕೆಯ ವರದಿಗಳನ್ನು ನಂಬುವುದಿಲ್ಲವೆಂದು ಖೇಣಿಗೆ ಬೆಂಬಲ ಕೊಟ್ಟಿದ್ದು ಇನ್ನಷ್ಟು ಶೋಚನೀಯವೆನಿಸಿದೆ.

Comments are closed.