ಕರ್ನಾಟಕ

ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿಯ ಪತ್ನಿ ಸರ ನಾಪತ್ತೆ

Pinterest LinkedIn Tumblr

ಬೆಂಗಳೂರು (ಫೆ.13): ಐಎಎಸ್ ಅಧಿಕಾರಿ ಪತ್ನಿಯ 20 ಗ್ರಾಂ ಚಿನ್ನದ ಸರ ವಿಧಾನಸೌಧದಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು (ಫೆ.13): ಐಎಎಸ್ ಅಧಿಕಾರಿ ಪತ್ನಿಯ 20 ಗ್ರಾಂ ಚಿನ್ನದ ಸರ ವಿಧಾನಸೌಧದಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಣಕಾಸು ಇಲಾಖೆಯ ಕಾರ್ಯದರ್ಶಿ ರಿತೇಶ್ ಕುಮಾರ್ ಪತ್ನಿಯ ಸರವನ್ನು ಸರಿಪಡಿಸಲು ತಂದಿದ್ದರು. ವಿಧಾನಸೌಧದ 2ನೇ ಮಹಡಿಯ ಕೊಠಡಿ 208ರಲ್ಲಿ ಸರ ನಾಪತ್ತೆಯಾಗಿದೆ.
ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಸರಿ ಮಾಡಿಸದೇ ತಮ್ಮ ಡ್ರಾಯರ್​ನಲ್ಲಿ ಸರವನ್ನು ಹಾಗೇ ಇಟ್ಟಿದ್ದರು. ನಾಪತ್ತೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments are closed.