ಕೆಲವು ಆಹಾರ ಪದಾರ್ಥಗಳು ಕೆಲವರಿಗೆ ಇಷ್ಟವಾಗುತ್ತವೆ, ಕೆಲವರಿಗೆ ಇಷ್ಟವಾಗಲ್ಲ. ಕೆಲವು ಆಹಾರ ಪದಾರ್ಥಗಳು ನೋಡಿದರೆ ಯಾರಿಗೇ ಆಗಲಿ ಬಾಯಲ್ಲಿ ನೀರೂರುತ್ತದೆ. ಸಹಜವಾಗಿ ಅವನ್ನು ತಿನ್ನಬೇಕೆಂಬ ಬಯಕೆಯಾಗುತ್ತದೆ. ಹಸಿವಾಗದಿದ್ದರೂ ಆ ರೀತಿಯ ಆಹಾರ ಪದಾರ್ಥಗಳನ್ನು ನೋಡಿದ ಕೂಡಲೆ ಹಸಿವು ಆಗುತ್ತದೆ. ಹಾಗಾಗಿ ಎಲ್ಲರೂ ಅದನ್ನು ಅತಿಯಾಗಿ ತಿನ್ನುತ್ತಾರೆ. ಆ ರೀತಿ ತಿಂದರೂ ಹಸಿವು ಕಡಿಮೆಯಾಗಲ್ಲ. ಇನ್ನೂ ಆಗುತ್ತಲೇ ಇರುತ್ತದೆ. ಆ ರೀತಿ ಬಾಯಲ್ಲಿ ನೀರೂರಿಸುವ ಆಹಾರ ಪದಾರ್ಥಗಳು ಯಾವುದು ಎಂದು ಈಗ ತಿಳಿದುಕೊಳ್ಳೋಣ.
1. ಸಿರಿಯಲ್ಸ್
ಇವನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಅನ್ನಿಸಲ್ಲ. ಇನ್ನೂ ತಿನ್ನಬೇಕು ಅನ್ನಿಸುತ್ತದೆ. ತುಂಬಾ ಹಸಿವಾಗುತ್ತದೆ. ಅದಕ್ಕೆ ಕಾರಣ ಇವುಗಳಲ್ಲಿ ಹೆಚ್ಚಾಗಿರುವ ಸಕ್ಕರೆ ಪದಾರ್ಥ. ಇವುಗಳಲ್ಲಿ ಫೈಬರ್ ಇರುವುದೇ ಇಲ್ಲ. ಹಾಗಾಗಿ ಇದನ್ನು ಎಷ್ಟೇ ತಿಂದರೂ ಹಸಿವಾಗುತ್ತಿರುತ್ತದೆ.
2. ವೈಟ್ ಬ್ರೆಡ್
ವೈಟ್ ಬ್ರೆಡ್ ತಿಂದಕೂಡಲೆ ಯಾರಿಗೇ ಆಗಲಿ ಹಸಿವಾಗುತ್ತದೆ. ಯಾಕೆಂದರೆ ಇದರಲ್ಲಿ ಇರುವ ಪದಾರ್ಥಗಳು ಇನ್ಸುಲಿನ್ ಹೆಚ್ಚಾಗಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಹಾಗಾಗಿ ಹಸಿವು ಹೆಚ್ಚುತ್ತದೆ. ಇನ್ನೂ ಜಾಸ್ತಿ ತಿನ್ನುತ್ತೇವೆ.
3. ಚಿಪ್ಸ್, ಪಾಪ್ ಕಾರ್ನ್
ಸಿನಿಮಾ ನೋಡುತ್ತಿದ್ದಾಗ, ಟೈಂ ಪಾಸ್ ಮಾಡೋಣ ಎಂದು ಬಹಳಷ್ಟು ಮಂದಿ ಪಾಪ್ ಕಾರ್ನ್, ಚಿಪ್ಸ್ ತಿನ್ನುವುದು ಸಹಜ. ಆದರೆ ಇವುಗಳಲ್ಲಿ ಅಧಿಕ ಉಪ್ಪಿನ ಕಾರಣ ದೇಹದಲ್ಲಿನ ನೀರಿನ ಅಂಶವೆಲ್ಲಾ ಹೋಗಿ ದೇಹ ಡೀಹೈಡ್ರೇಟ್ ಆಗುತ್ತದೆ. ಹಾಗಾಗಿ ದಾಹದ ಜೊತೆಗೆ ಹಸಿವು ಸಹ ಆಗುತ್ತದೆ. ಆದಕಾರಣ ಇವನ್ನು ಸಹ ಎಷ್ಟೇ ತಿಂದರೂ ಹೊಟ್ಟೆ ತುಂಬಲ್ಲ. ಹಸಿವು ಆಗುತ್ತಲೇ ಇರುತ್ತದೆ.
4. ಪ್ಯಾಕೇಜ್ ಜ್ಯೂಸ್
ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇರುತ್ತದೆ. ಇವನ್ನು ಕುಡಿದಾಗ ರಕ್ತದಲ್ಲಿನ ಗ್ಲೂಕೋಸ್ ಲೆವೆಲ್ಸ್ ಹೆಚ್ಚಾಗುತ್ತದೆ. ಹಾಗಾಗಿ ಅಧಿಕ ದಾಹದ ಜತೆಗೆ ಹಸಿವೂ ಆಗುತ್ತದೆ.
5. ಫಾಸ್ಟ್ ಫುಡ್
ಸರಿಸುಮಾರು ಎಲ್ಲಾ ವಿಧದ ಫಾಸ್ಟ್ ಫುಡ್ಸ್‌ಗಳಲ್ಲಿ ಟ್ರಾನ್ಸ್‌ಫ್ಯಾಟ್ ಹೆಚ್ಚಾಗಿ ಇರುತ್ತದೆ. ಇದು ನಮ್ಮ ದೇಹದಲ್ಲಿ ಸೇರಿದ ಕೂಡಲೇ ನ್ಯೂರೋ ಟ್ರಾನ್ಸ್ ಮೀಟರ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರ ಕಾರಣ ನಾವು ಹೆಚ್ಚಾಗಿ ತಿನ್ನುವಂತೆ ಮಾಡುತ್ತದೆ. ಅಷ್ಟು ಶೀಘ್ರವಾಗಿ ಹೊಟ್ಟೆ ತುಂಬಿದ ಫೀಲಿಂಗನ್ನು ಅವು ಮಾಡಲ್ಲ. ಹಾಗಾಗಿ ಇನ್ನೂ ಜಾಸ್ತಿ ತಿನ್ನುತ್ತೇವೆ.
6. ಚ್ಯೂಯಿಂಗ್ ಗಮ್
ಚ್ಯೂಯಿಂಗ್ ಗಮ್ ಜಗಿಯುವಾದ ನಮ್ಮ ಜೀರ್ಣಕೋಶದೊಳಕ್ಕೆ ಹಲವು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಅವು ನಮಗೆ ಹಸಿವಾಗುವಂತೆ ಮಾಡುತ್ತವೆ.
7. ಡೈಟ್ ಡ್ರಿಂಕ್
ಇವುಗಳಲ್ಲಿ ಸಹ ಸಕ್ಕರೆ ಅಂಶ ಅಧಿಕವಾಗಿ ಇರುತ್ತದೆ. ಹಾಗಾಗಿ ಈ ಡ್ರಿಂಕ್ಸ್ ಕುಡಿದಾಗ ದೇಹದಲ್ಲಿ ಸಕ್ಕರೆ ಹೆಚ್ಚಾಗಿ ಸೇರಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಫಲಿತಾಂಶ ಹಸಿವು ಹೆಚ್ಚಾಗುತ್ತದೆ.
8. ಫ್ರೋಜನ್ ಯೋಗರ್ಟ್
ಇವುಗಳಲ್ಲಿ ಇರುವ ಅಧಿಕ ಸಕ್ಕರೆಯಿಂದ ಇದು ರಕ್ತದಲ್ಲಿ ಸೇರಿದ ಬಳಿಕ ಗ್ಲೂಕೋಸ್ ಆಗಿ ಬದಲಾಗುತ್ತದೆ. ಫಲಿತಾಂಶ ಭಾರಿ ಪ್ರಮಾಣದಲ್ಲಿ ಗ್ಲೂಕೋಸ್ ರಕ್ತದಲ್ಲಿ ಇರುವುದರಿಂದ ಹಸಿವು ಚೆನ್ನಾಗಿ ಆಗುತ್ತದೆ.
9. ಆಪಲ್
ಆಪಲ್‍ನಲ್ಲಿ ಶೇ.95ರಷ್ಟು ಇರುವುದು ಕಾರ್ಬೋಹೈಡ್ರೇಟ್. ಇದರಿಂದ ಆಪಲ್ ತಿನ್ನುವಾಗ ನಮಗೆ ಹೊಟ್ಟೆ ತುಂಬಿದ ಭಾವನೆಯಾಗಲ್ಲ. ಜತೆಗೆ ಹಸಿವು ಜಾಸ್ತಿ.
10. ಕೆಚಪ್
ಕೆಚಪ್‌ಗಳಲ್ಲಿ ಹೈ ಫ್ರಕ್ಟೋಸ್ ಸಿರಪ್ ಇರುತ್ತದೆ. ಇದು ಹಸಿವನ್ನು ನಿಯಂತ್ರಿಸುವ ಲೆಫ್ಟಿನ್ ಎಂಬ ಹಾರ್ಮೋನನ್ನು ಪ್ರಭಾವಿಸುತ್ತದೆ. ಆದಕಾರಣ ಕೆಚಪ್ ತಿನ್ನುವಾಗ ಲೆಫ್ಟಿನ್ ಪ್ರಭಾವಕ್ಕೊಳಗಾಗಿ ನಮಗೆ ಹಸಿವು ಜಾಸ್ತಿಯಾಗುವಂತೆ ಮಾಡುತ್ತದೆ.
Comments are closed.