ಮೈಸೂರು ನ.06: ಮೈಸೂರಿನ ಏಳು ವರ್ಷದ ಬಾಲಕಿಯೊಬ್ಬಳು ಲಾರಿ, ಬೈಕುಗಳನ್ನು ಯಶಸ್ವಿಯಾಗಿ ಚಾಲನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಲು ಯತ್ನಿಸಿದ್ದಾಳೆ.
ಭಾನುವಾರ ತಿಲಕ್ನಗರದ ಈದ್ಗಾ ಮೈದಾನದಲ್ಲಿ ನಡೆದ ಶೋನಲ್ಲಿ ಬನ್ನಿಮಂಟಪ ಸೆಂಟ್ ಜೋಸೆಫ್ ಶಾಲೆಯಲ್ಲಿ ಎರಡನೆ ತರಗತಿ ವಿದ್ಯಾರ್ಥಿನಿ ರಿಫಾ ತಷ್ಕಿನ್ ಸರಾಗವಾಗಿ ಹತ್ತು ಚಕ್ರದ ಅಶೋಕ ಲೈಲ್ಯಾಂಡ್ ಲಾರಿ ಡ್ರೈವ್ ಮಾಡಿ ತೋರಿಸಿ ವಿಶ್ವದಾಖಲೆಗೆ ಯತ್ನಿಸಿದಳು.
ಈ ಪೋರಿಗೆ ಡ್ರೈವ್ ಮಾಡೋದು ಅಂದ್ರೆ ನೀರು ಕುಡಿಸಿದಷ್ಟೆ ಸಲೀಸು. ಇತ್ತೀಚೆಗೆ ನಡೆದ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲೂ ಬೈಕ್ ಓಡಿಸಿ ಗಮನ ಸೆಳೆದಿದ್ದಳು. ಇದೇ ವೇಳೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ ಅವರು ತಾಸ್ಕಿನ್ ಪ್ರತಿಭೆಗೆ ಶಹಬ್ಬಾಗಿರಿ ಹೇಳಿದ್ದನ್ನು ಸ್ಮರಿಸಬಹುದು.
Comments are closed.