ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಎಂಬ ಭೇಧಭಾವವಿಲ್ಲದೆ ಎಲ್ಲರಿಗೂ ಸಕ್ಕರೆ ಕಾಯಿಲೆ ಬರುತ್ತಿದೆ. ಆದರೆ ಮಧುಮೇಹವನ್ನು ಪ್ರಾಥಮಿಕ ಹಂತದಲ್ಲೇ ಕಂಡುಹಿಡಿದರೆ ಆ ಅಪಾಯದಿಂದ ಪಾರಾಗಬಹುದು. ಇವುಗಳಲ್ಲಿ ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ ಒಮ್ಮೆ ಚೆಕ್ ಮಾಡಿಕೊಂಡು ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಿ. ಯಾಕೆಂದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಏನೋ ಒಂದು ಅನಾರೋಗ್ಯ ಸಮಸ್ಯೆ ಆಕಸ್ಮಿಕವಾಗಿ ಬರುತ್ತಿದೆ. ಇವುಗಳನ್ನು ಸೂಚಿಸುತ್ತಾ ನಮ್ಮ ದೇಹ ಮೊದಲೇ ಕೆಲವು ಅನಾರೋಗ್ಯ ಲಕ್ಷಣಗಳನ್ನು ನಮಗೆ ತಿಳಿಸುತ್ತದೆ. ಆದರೆ ನಮ್ಮಲ್ಲಿ ಅಧಿಕ ಮಂದಿ ಈ ಅನಾರೋಗ್ಯ ಲಕ್ಷಣಗಳು, ಸೂಚನೆಗಳನ್ನು ಕಡೆಗಣಿಸಿಬಿಡುತ್ತಿದ್ದಾರೆ. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಆರೋಗ್ಯರೀತ್ಯ, ಆರ್ಥಿಕವಾಗಿ ನಷ್ಟಗೊಂಡು ನರಳಬೇಕಾಗುತ್ತದೆ. ಆದರೆ ದೇಹ ಕಾಲಕಾಲಕ್ಕೆ ತಿಳಿಸುವ ಅನಾರೋಗ್ಯ ಎಚ್ಚರಿಕೆಗಳನ್ನು ಮೊದಲೇ ಕಂಡುಹಿಡಿದರೆ ದೀಘಕಾಲದ ವ್ಯಾಧಿಗಳು ಬರದಂತೆ ಮೊದಲೇ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.
ಅಂತಹ ಕಾಯಿಲೆಗಳಲ್ಲಿ ಮಧುಮೇಹ ಸಹ ಒಂದು. ರಕ್ತದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವ ಕಾರಣ, ಇನ್ಸುಲಿನ್ ಸರಿಯಾಗಿ ಉತ್ಪತ್ತಿಯಾಗದೆ, ಒಂದು ವೇಳೆ ಉತ್ಪತ್ತಿಯಾದರೂ ದೇಹ ಅದನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲ್ಲ. ನಿತ್ಯ ದೇಹಕ್ಕೆ ಅಗತ್ಯ ವ್ಯಾಯಾಮ ಇಲ್ಲದಿರುವುದರಿಂದಲೂ ಮಧುಮೇಹ ಬರುತ್ತದೆ. ಇದು ಬರಬೇಕಾದರೆ ನಮಗೆ ಮೊದಲೇ ಕೆಲವು ಲಕ್ಷಣಗಳು ಕಾಣಿಸುತ್ತವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಇದರಿಂದ ಸಾಕಷ್ಟು ಜಾಗ್ರತೆ ವಹಿಸಲು ಸಾಧ್ಯವಾಗುತ್ತದೆ.
1. ಸಕ್ಕರೆ ಕಾಯಿಲೆ ಇದ್ದರೆ ಬಾಯಿ ಯಾವಾಗಲು ಒಣಗಿದಂತೆ ಇರುತ್ತದೆ. ಇದರ ಜತೆಗೆ ದಾಹ ಹೆಚ್ಚಾಗಿ ಆಗುತ್ತಿರುತ್ತದೆ. ಮೂತ್ರ ವಿಸರ್ಜನೆಗೆ ಜಾಸ್ತಿ ಸಲ ಹೋಗುತ್ತಾರೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಈ ಲಕ್ಷಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
2. ಸಾಮಾನ್ಯವಾಗಿ ನಿತ್ಯ ದೈಹಿಕ ಶ್ರಮ, ವ್ಯಾಯಾಮ ಮಾಡುವವರು, ಕೆಲಸ ಮಾಡುವವರು ಸುಸ್ತಾಗುತ್ತಿರುತ್ತಾರೆ. ಆ ರೀತಿ ಅಲ್ಲದೆ ಮಾಮೂಲಿಯಾಗಿ ಸುಸ್ತಾದಂತೆ ಇದ್ದರೆ ಅವರೂ ತಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಬೆಳೆದಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
3. ಯಾವಾಗಲೂ ನಿಶ್ಯಕ್ತಿ, ನೀರಸವಾಗಿ ಇದ್ದರೆ ಕೂಡಲೆ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಹೆಚ್ಚಾಗಿ ಹಸಿವಾಗುತ್ತಿದ್ದರೂ, ಚರ್ಮದ ಮೇಲೆ ತುರಿಕೆಯಾಗುತ್ತಿದ್ದರೂ, ತೂಕ ಹೆಚ್ಚಾಗುತ್ತಿದ್ದರೂ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬೇಕು.
4. ಸಕ್ಕರೆಕಾಯಿಲೆ ಇದ್ದರೆ ಜೀರ್ಣಕ್ರಿಯೆ ಸಹ ಚೆನ್ನಾಗಿ ಕೆಲಸ ಮಾಡಲ್ಲ. ಇದರ ಜತೆ ಗಾಯಗಳು, ಹುಣ್ಣುಗಳು, ಪೆಟ್ಟುಗಳಂತಹವು ಶೀಘ್ರವಾಗಿ ಗುಣವಾಗಲ್ಲ.
5. ಏಕಾಗ್ರತೆ ಕಳೆದುಕೊಳ್ಳುವುದು, ನರಗಳ ದೌರ್ಬಲ್ಯ, ಜ್ಞಾಪಕಶಕ್ತಿ ಕುಂಟಿತಗೊಳ್ಳುವಂತಹ ಲಕ್ಷಣಗಳು ಸಹ ಹೈ ಬ್ಲಡ್ ಸಕ್ಕರೆಯನ್ನು ಸೂಚಿಸುತ್ತವೆ.
6. ಸಕ್ಕರೆ ಕಾಯಿಲೆ ಇದ್ದರೆ ಗ್ಲಯಿಸಿಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ದೇಹಕ್ಕೆ ಹೆಚ್ಚುವರಿ ಕ್ಯಾಲರಿಗಳು ಸೇರಲ್ಲ.
7. ಮೇಲಿನ ಲಕ್ಷಣಗಳು ಇದ್ದರೆ ಕೂಡಲೆ ಆಹಾರ ಸಂಬಂಧ ಎಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖ್ಯವಾಗಿ ಸೂಕ್ತ ಪೋಷಕಾಂಶಗಳಿಂದ ಕೂಡಿರುವ ಪೌಷ್ಟಿಕ ಆಹಾರ ನಿತ್ಯ ತೆಗೆದುಕೊಳ್ಳಬೇಕು. ಇದರ ಜತೆಗೆ ಜಂಕ್ ಫುಡ್‍ಗೆ ಫುಲ್‍ಸ್ಟಾಪ್ ಇಡಬೇಕು.
Comments are closed.