ಹಾವೇರಿ; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭಾಗ್ಯಗಳ ಸರಮಾಲೆ ಮುಂದುವರಿದಿದ್ದು, ಇದೀಗ ನೇಕಾರರಿಗೆ ಸಾಲಮನ್ನಾ ಭಾಗ್ಯ ದೊರಕಿದೆ. ನೇಕಾರರು ವಿವಿಧ ಯೋಜನೆಗಳಡಿ ಮನೆ ನಿರ್ಮಾಣ ಹಾಗೂ ನೇಕಾರ ವೃತ್ತಿಗಾಗಿ ಪಡೆದಿರುವ ಸಾಲ ಮನ್ನಾ ಮಾಡುವುದಾಗಿ ಸಚಿವ ರುದ್ರಪ್ಪ ಲಮಾಣಿ ಸೋಮವಾರ ತಿಳಿಸಿದ್ದಾರೆ.
ಸೋಮವಾರ ಜವಳಿ, ಮುಜರಾಯಿ ಖಾತೆ ಸಚಿವ ಲಮಾಣಿ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ನೇಕಾರ ವೃತ್ತಿಗಾಗಿ ಪಡೆದ 50ಸಾವಿರವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಮನೆ ನಿರ್ಮಾಣಕ್ಕಾಗಿ ಪಡೆದ 33 ಕೋಟಿ 41 ಲಕ್ಷ ರೂಪಾಯಿ ಸಾಲ, ಬಡ್ಡಿ ಮನ್ನಾ ಮಾಡುವುದಾಗಿ ವಿವರಿಸಿದರು.
ಸಾಲಮನ್ನಾ ಲಾಭ ಪಡೆದ ನೇಕಾರರಿಗೆ ಋಣಮುಕ್ತ ಪತ್ರವನ್ನು ನೀಡಲಾಗುವುದು.
-ಉದಯವಾಣಿ
Comments are closed.