ಬೆಂಗಳೂರು: ಗುಜರಾತ್ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ವರದಿ ನೀಡಿವೆ. ಆದರೆ ಬೆಟ್ಟಿಂಗ್ ದಂಧೆಯಲ್ಲಿ ಬಿಜೆಪಿ ತನ್ನ ತಾಕತ್ತನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಈ ಬಾರಿ ಗುಜರಾತ್ನಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳುತ್ತಿವೆ ಸಟ್ಟಾ ಮಾರುಕಟ್ಟೆಗಳು.
ಕರ್ನಾಟಕದಲ್ಲಿ ನಡೆಯುವ ಅಕ್ರಮ ಬೆಟ್ಟಿಂಗ್ ದಂಧೆ ಸಟ್ಟಾ ಬಜಾರ್, ರಾಜಕೀಯ ನಾಯಕರ ಹಣೆಬರಹ ನಿರ್ಧರಿಸಿರುವುದು ಮಾತ್ರ ಕೊಂಚ ವಿಚಿತ್ರ, ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಗುಜರಾತ್ನಲ್ಲಿ 110-120 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಬಹುದು. ಆದರೆ ಸಟ್ಟಾ ಬಜಾರ್ನಲ್ಲಿ ಬೆಟ್ಟಿಂಗ್ ಮಾಡುವವರ ಮೋಹ ಕಾಂಗ್ರೆಸ್ ಕಡೆ ವಾಲಿದ್ದು, ಕಳೆದ ಒಂದು ವಾರದಿಂದ ಕಾಂಗ್ರೆಸ್ ಮೇಲೆ ಹಣ ಹೂಡುವವರ ಸಂಖ್ಯೆ ಏರಿದೆ ಎಂದು ಉತ್ತರ ಕರ್ನಾಟಕದ ಬಾಜಿದಾರರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಾನಾ ಸನ್ನಿವೇಶಗಳಿಗೆ ಇಂತಿಷ್ಟು ಬಾಜಿ ಮೊತ್ತ ಎಂದು ಸಾರಲಾಗುತ್ತದೆ. ಪಂಟರ್ಗಳು ನಾನಾ ವಿಷಯವಾಗಿ ಯಾವುದೇ ಮೊತ್ತದ ಪಣ ಕಟ್ಟಲು ತುದಿಗಾಲಲ್ಲಿ ನಿಂತಿರುತ್ತಾರೆ. ಒಂದು ವೇಳೆ ಬಿಜೆಪಿ 110 ಸ್ಥಾನಗಳನ್ನು ದಕ್ಕಿಸಿಕೊಳ್ಳುತ್ತದೆ ಎಂಬ ಬೆಟ್ಟಿಂಗ್ ನಿಜವಾದರೆ ಜೂಜಾಳಿಗೆ ಪ್ರತಿ ರೂಪಾಯಿಗೆ 25ಪೈಸೆ ದೊರೆಯುತ್ತದೆ. ಬೆಟ್ಟಿಂಗ್ ಮೊತ್ತ 1 ಲಕ್ಷವಾದರೆ, ಗೆದ್ದವರು 1.25 ಲಕ್ಷ ರೂ. ಜೇಬಿಗಿಳಿಸಬಹುದು. ಪಣದ ಮೊತ್ತ ಹಾಗೂ ಗೆಲ್ಲುವ ಸಾಧ್ಯತೆ ನಡುವೆ ತಿರುಗುಮುರುಗು ಸಂಬಂಧವಿದೆ.
ಆದರೆ ಕಳೆದ ಒಂದು ವಾರದಿಂದ ಬಿಜೆಪಿ ಪರ ಇದ್ದ ಸಮೀಕ್ಷೆ ತಿರುಗಿಬಿದ್ದಿದ್ದು, ಪಂಟರ್ಗಳು ಬೆಲೆ ಏರಿಳಿಕೆ ಮಾಡದೇ ತಟಸ್ಥವಾಗಿದ್ದಾರೆ, ಏಕೆಂದರೆ ವಾರದಿಂದ ಭಾರಿ ಹಿನ್ನಲೆ ಹೊಂದಿರುವ ಪಂಟರ್ಗಳು ಕಾಂಗ್ರೆಸ್ ಪಕ್ಷದ ಮೇಲೆ ಹೂಡಿಕೆ ಮಾಡುತ್ತಿದ್ದು, ಹುಬ್ಬಳ್ಳಿ ಮೂಲದ ಬುಕ್ಕಿಯೊಬ್ಬರ ಪ್ರಕಾರ, ಕಾಂಗ್ರೆಸ್ ಮೇಲೆ ಯಾರೋ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾರೆ, ಅಲ್ಲದೇ ಚುನಾವಣೆಯಲ್ಲಿ ಕಾಂಗ್ರೆಸ್ 93 ಸೀಟ್ ಗೆಲ್ಲಬಹುದು ಎನ್ನಲಾಗಿದೆ. ಹೀಗಾಗಿ ಸಟ್ಟಾ ದರ ತಟಸ್ಥವಾಗಿಯೇ ಉಳಿದಿದೆ ಎಂದು ಹೇಳಿದ್ದಾನೆ.
‘ಶೇ.70ರಷ್ಟು ನಗರದ ಪಂಟರ್ಗಳು ಬಿಜೆಪಿಯನ್ನೇ ಬೆಂಬಲಿಸಿದ್ದಾರೆ ಆದರೆ ಸಣ್ಣ ಪುಟ್ಟ ಹಳ್ಳಿ ಹಾಗೂ ನಗರ ಪ್ರದೇಶದ ಪಂಟರ್ಗಳು ಕಾಂಗ್ರೆಸ್ ಬೆಂಬಲಕ್ಕೆ ಮುಂದಾಗಿದ್ದಾರೆ’ ಎಂದು ಹುಬ್ಬಳ್ಳಿಯ ಪಂಟರ್ ಹೇಳಿದ್ದಾರೆ.
ಮತ್ತೊಂದು ವಿಚಾರವೆಂದರೆ ಇಲ್ಲಿ ಯಾರೂ ಅವರ ನಿಜ ಹೆಸರನ್ನು ಬಳಸಿಕೊಂಡು ದಂಧೆ ಮಾಡುತ್ತಿಲ್ಲ, ಬದಲಾಗಿ ಸಚಿನ್, ವಿರಾಟ್, ರೈನಾ, ರೋಹಿತ್ ಇನ್ನೂ ಹಲವು ಫೇಮಸ್ ಹೆಸರಿನ ವ್ಯಕ್ತಿಗಳಲ್ಲಿ ದಂದೆ ನಡೆಯುತ್ತದೆ. ಅಲ್ಲದೇ ಈ ದಂಧೆ ನಡೆಸಲು ದೇಶದಾದ್ಯಂತ ಬುಕ್ಕಿಗಳನ್ನು ಗಣ್ಯ ವ್ಯಕ್ತಿಗಳೇ ನೇಮಕ ಮಾಡಿ ಅವರವರ ಸ್ಥಳಗಳಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮದ ಪಟ್ಟಯ ಪುಸ್ತಕ ನೀಡಲಾಗುತ್ತದೆ. ಹೀಗಾಗಿ ಅವರನ್ನು ಕಂಡುಹಿಡಿಯವುದು ತೀರ ಕಷ್ಟಕರ ಎಂದು ಪೊಲೀಸರು ಹೇಳಿದ್ದಾರೆ.
Comments are closed.