ಕರ್ನಾಟಕ

2 ಗಂಟೆಗೊಬ್ಬರನ್ನು ಆತ್ಮಹತ್ಯೆಗೆ ದೂಡುತ್ತಿದೆ ಮದ್ಯ, ಮಾದಕ ದ್ರವ್ಯ

Pinterest LinkedIn Tumblr

ಬೆಂಗಳೂರು: ಭಾರತದಲ್ಲಿ ಮದ್ಯ ಮತ್ತು ಮಾದಕದ್ರವ್ಯಗಳಿಂದಾಗಿ ಎರಡು ಗಂಟೆಗೊಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು 2014 -2016 ಅವಧಿಯ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಎನ್‌ಸಿಆರ್‌ಬಿ ಪ್ರಕಟಿಸಿರುವ ‘2016ರಲ್ಲಿ ಭಾರತದಲ್ಲಿ ಸಂಭವಿಸಿರುವ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು’ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ಪ್ರತಿದಿನ ಮದ್ಯ ಮತ್ತು ಮಾದಕ ದ್ರವ್ಯ ಸೇವನೆಯಿಂದ ಪ್ರತಿದಿನ 14 ಮಂದಿ ಸಾಯುತ್ತಿದ್ದಾರೆ ಎಂದೂ ವರದಿ ತಿಳಿಸಿದೆ.

2015ರಿಂದ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣದಲ್ಲಿ ಶೇ 70% ಹೆಚ್ಚಳವಾಗಿದೆ. ಆದರೆ ಈ ಅಂಕಿ ಅಂಶ ನಿಖರವಾದುದಲ್ಲ, ಇದಕ್ಕಿಂತ ಹೆಚ್ಚೇ ಇದೆ ಎಂದು ನಿಮ್ಮಾನ್ಸ್‌ ನಿರ್ದೇಶಕ ಬಿ.ಎನ್‌. ಗಂಗಾಧರ್‌ ಹೇಳಿದ್ದಾರೆ.

ಮದ್ಯ ಮತ್ತು ಮಾದಕ ದ್ರವ್ಯಗಳಿಂದಾಗಿ ನಡೆಯುತ್ತಿರುವ ಸಾವಿನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಸಾಮಾನ್ಯವಾಗಿ ಇಂಥ ಸಾವುಗಳಲ್ಲಿ ಪೊಲೀಸರು ಮದ್ಯವನ್ನು ಸಾಮಾನ್ಯ ಪ್ರಸ್ತಾಪಿಸಿದರೂ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿ ಪಡೆದಿರುವುದಿಲ್ಲ ಮತ್ತು ನೀಡುವುದಿಲ್ಲ. ಹೀಗಾಗಿ ಮಾದಕ ದ್ರವ್ಯಗಳಿಂದ ಆತ್ಮಹತ್ಯೆಗೆ ಮುಂದಾಗುವಪ್ರಕರಣಗಳು ಬಹಳಷ್ಟಿವೆ ತಜ್ಞರು ಹೇಳುತ್ತಾರೆ.

Comments are closed.