ಕರ್ನಾಟಕ

ಸಂವಿಧಾನ ತಿದ್ದುಪಡಿ ಮಾಡಲು ಮುಟ್ಟಿದರೆ ದಂಗೆಯಾಗುತ್ತದೆ: ಸಿದ್ದರಾಮಯ್ಯ

Pinterest LinkedIn Tumblr


ತುಮಕೂರು: ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ದಂಗೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.

ಸಿರಾ ನಗರದ ವಿವೇಕಾನಂದ ಮೈದಾನದಲ್ಲಿ ಗುರುವಾರ ನಡೆದ ಸರಕಾರದ ಸಾಧನ ಸಂಭ್ರಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಗೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಹಬಾಳ್ವೆ ಸಂದೇಶ ಸಾರುವ ಅಂಬೇಡ್ಕರ್ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರಿಗೆ ಜಾತಿಗಳ ನಡುವೆ ವಿಷ ಬೀಜ ಬಿತ್ತಿ, ಧರ್ಮಗಳ ನಡುವೆ ಸಂಘರ್ಷ ತಂದಿಟ್ಟು ಆ ಮ‌ೂಲಕ ಅಧಿಕಾರಕ್ಕೆ ಬಂದು ಯಥಾಸ್ಥಿತಿ ಯನ್ನು ಮುಂದುವರೆಸುವುದು ಅವರ ಉದ್ದೇಶ ಎಂದರು

ದೇಶದ ಸಂವಿಧಾನ ಬದಲಾವಣೆಗೆ ಮುಟ್ಟಿದ್ದೇ ಆದಲ್ಲಿ ದಂಗೆಯಾಗುತ್ತದೆ ಎಂದು ಪುನರುಚ್ಚರಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಒಂದು ಲಕ್ಷ ಕೋಟಿ ರೂ. ವೆಚ್ಚ ಮಾಡುವುದಾಗಿ ಯಡಿಯೂರಪ್ಪ ಹೇಳುತ್ತಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ. ನಾವು ಕಳೆದ ಐದು ವರ್ಷಗಳಲ್ಲಿ ಐವತ್ತು ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದೇವೆ ಎಂದರು.

Comments are closed.