ಬೆಂಗಳೂರು: ಹೆತ್ತ ತಾಯಿಯೇ ಎರಡು ವರ್ಷದ ಮಗುವನ್ನು ಕೊಲೆ ಮಾಡಿರುವ ಘಟನೆ ಆನೇಕಲ್ ತಾಲ್ಲೂಕಿನಲ್ಲಿ ಜರುಗಿದೆ.
ಅನ್ನಪೂರ್ಣ ಹೆತ್ತತಾಯಿಂದ ಕೊಲೆ ಮಗುವಾಗಿದ್ದು, ತಾಯಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಮಗುವನ್ನು ಕೊಲೆ ಮಾಡಿದ್ದಾಳೆ.
ತಾಯಿ ನಿವೇದಿತಾಗೆ ತನ್ನ ಮಾವನೊಂದಿಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದೂವರೆ ವರ್ಷದಿಂದ ಅತ್ತೆಯ ಮಗ ಸತೀಶನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಮಗುವಿಗೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ದಾಖಲಾಗಿತ್ತು.
ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ನಿವೇದಿತಾ ಹಾಗೂ ಸತೀಶ ಆಸ್ಪತ್ರೆಯಿಂದ ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಚಂದ್ರಶೇಖರ ಆಸ್ಪತ್ರೆಯಲ್ಲಿ ಮಗು ಹಾಗೂ ನಿವೇದಿತಾ ಇಲ್ಲದಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾನೆ. ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸತೀಶನೊಂದಿಗೆ ಪರಾರಿಯಾದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆಯಲ್ಲಿ ಮಗುವನ್ನು ಕೊಂದು ಎಸೆದಿರುವುದಾಗಿ ಬಾಯಿ ಬಿಟ್ಟಿದ್ದಾರೆ.
Comments are closed.