ವಿಜಯಪುರ: ವಿಜಯಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ದೇವರಾದ ಅಯ್ಯಪ್ಪನ ಮಾಲೆ ಧರಿಸಿ ವೃತ ಕೈಗೊಂಡು ಜಾತಿ ಮತವೆಂದು ಹೊಡೆದಾಡುವ ಜನರು ತಲೆ ತಗ್ಗಿಸುವಂತೆ ಮಾಡಿದ್ದಾನೆ.
ಇಬ್ರಾಹಿಂ ಎಂಬ 13 ವರ್ಷದ ಬಾಲಕ ಮೊದಲಿನಿಂದಲೂ ಅಯ್ಯಪ್ಪ ದೇವರಲ್ಲಿ ಭಕ್ತಿಭಾವವನ್ನು ಹೊಂದಿದ್ದು, ಡಿಸೆಂಬರ್ ನಲ್ಲಿ ಮಾಲೆ ಧರಿಸಿ, ಮುಂಜಾನೆ ಬೇಗ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ ಮಡಿಯುಟ್ಟು ಅಯ್ಯಪ್ಪನ ಮಂತ್ರವನ್ನು ಜಪಿಸುತ್ತಾನೆ. ಆಮೇಲೆ ಜನವರಿ 14 ರಂದು ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುದಾಗಿ ತಿಳಿಸಿದ್ದಾನೆ.
ಮೊದಲು ಇತನ ಹೆತ್ತವರು ಇದಕ್ಕೆ ಒಪ್ಪಿಗೆ ನೀಡದಿದ್ದರೂ ಆಮೇಲೆ ಮಗನ ಭಕ್ತಿಯನ್ನು ಕಂಡು ಮಾಲೆ ಧರಿಸಲು ಒಪ್ಪಿಗೆ ನೀಡಿದ್ದಾರೆ.
Comments are closed.