ಬೆಂಗಳೂರು: ಯೋನಿ ಬಹಳ ಸೂಕ್ಷ್ಮ ಅಂಗ. ಸತತವಾಗಿ ಸೆಕ್ಸ್ ನಡೆಸುವುದರಿಂದ ಅಥವಾ ರಫ್ ಸೆಕ್ಸ್ ನಿಂದಾಗಿ ಯೋನಿಯಲ್ಲಿ ಉರಿಯುತ್ತಿದ್ದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಟಿಪ್ಸ್.
ಬಿಸಿ ನೀರಿನ ಸ್ನಾನ
ಸೆಕ್ಸ್ ಬಳಿಕ ಯೋನಿ ಉರಿಯುತ್ತಿದ್ದರೆ ಒಂದು ಬಾತ್ ಟಬ್ ನಲ್ಲಿ ಹದ ಬಿಸಿ ನೀರು ತುಂಬಿಸಿಕೊಂಡು ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಸೇರಿಸಿ ಅದರಲ್ಲಿ ಅರ್ಧಗಂಟೆ ಕೂತಿರಿ. ನಂತರ ನೀಟಾಗಿ ಒರೆಸಿಕೊಂಡು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.
ಹದ ಬಿಸಿ ನೀರಿನ ಶಾಖ
ಯೋನಿ ಸೂಕ್ಷ್ಮಅಂಗ. ಹೀಗಾಗಿ ವಿಪರೀತ ಬಿಸಿ ನೀರು ತಾಕಿದರೆ ಇನ್ನಷ್ಟುನೋವಾಗಬಹುದು. ಹಾಗಾಗಿ ಹದ ಬಿಸಿನೀರಿನಲ್ಲಿ ಶುದ್ಧ ಬಟ್ಟೆ ಅಥವಾ ಹತ್ತಿ ಅದ್ದಿ ಶಾಖ ಕೊಡುತ್ತಿರಿ.
ಐಸ್
ಅನಿಯಂತ್ರಿತ ಸೆಕ್ಸ್ ನಿಂದಾಗಿ ಯೋನಿ ಊದಿಕೊಳ್ಳುವುದು ಅಥವಾ ರಕ್ತಸ್ರಾವ ಸಹಜ. ಹೀಗಾಗಿದ್ದಲ್ಲಿ ಐಸ್ ನಿಂದ ಮಸಾಜ್ ಮಾಡಿಕೊಳ್ಳಿ.
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಎಲ್ಲಕ್ಕಿಂತ ಬೆಸ್ಟ್. ಇದನ್ನು ಹಚ್ಚಿಕೊಳ್ಳುವುದೂ ಸುಲಭ. ಗಾಯದಂತಾಗಿದ್ದರೂ ಕೊಬ್ಬರಿ ಎಣ್ಣೆ ಪರಿಹಾರ ನೀಡಬಹುದು. ಒಂದು ವೇಳೆ ಹೀಗೆ ಮಾಡಿಯೂ ನೋವು, ಊತ ಕಡಿಮೆಯಾಗಿಲ್ಲವೆಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
Comments are closed.