ಕರ್ನಾಟಕ

ರಾಗಿ ಸೆರಿ ಗಂಟಲಲ್ಲಿ ಸಿಲುಕಿ ಮಗು ಸಾವು

Pinterest LinkedIn Tumblr


ಮಾಗಡಿ: ರಾಗಿ ಸೆರಿ ತಿನ್ನಿಸುವಾಗ ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಮೃತಪಟ್ಟಿದೆ. ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಈ ದುರಂತ ನಡೆದಿದೆ. ಕಳೆದ 15 ದಿನದಿಂದ ಮಗುವಿಗೆ ರಾಗಿ ಸೆರಿ ತಿನ್ನಿಸುತ್ತಿದ್ದರು. ಬುಧವಾರ ಬೆಳಗ್ಗೆ ತಿನ್ನಿಸುವ ಸಮಯದಲ್ಲಿ ಗಂಟಲಿನಲ್ಲಿ ಸಿಲುಕಿದ್ದು ಮಗು ಅಸ್ವಸ್ಥಗೊಂಡಿದೆ.

ಮಗುವನ್ನು ಮಾಗಡಿಯ ಸರಕಾರಿ ಆಸ್ಪತ್ರೆಗೆ ಕರೆ ತರುತ್ತಿದ್ದ ಸಮಯದಲ್ಲಿ ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ. ಮಗು ಉಸಿರಾಟದ ಸಮಸ್ಯೆಯುಂಟಾಗಿ ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿನ ಪೋಷಕರಿಗೆ ಸುಮಾರು ಐದಾರು ವರ್ಷಗಳಿಂದ ಮಕ್ಕಳು ಇರಲಿಲ್ಲ. ಎರಡು ಬಾರಿ ತಾಯಿಗೆ ಗರ್ಭಪಾತವಾಗಿತ್ತು. ಮಗುವಿಗಾಗಿ ಸುಮಾರು 15 ಲಕ್ಷ ಖರ್ಚು ಮಾಡಿದ್ದರು ಎಂದು ತಿಳಿದು ಬಂದಿದೆ.

Comments are closed.