ಕರ್ನಾಟಕ

ಬಿಜೆಪಿ ಸರಕಾರವಿದ್ದಾಗ 96 ಕೊಲೆ, ನಮ್ಮ ಸರಕಾರದ ಅವಧಿಯಲ್ಲಿ 67 ಕೊಲೆ: ರಾಮಲಿಂಗಾರೆಡ್ಡಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಹಿಂದು ಕಾರ್ಯಕರ್ತರ ಕೊಲೆಗೆ ಕಾರಣಗಳೇನೆಂಬ ಬಗ್ಗೆ ಸಾಕ್ಷಿ ಸಮೇತ ವಿವರಣೆಯೊಂದಿಗೆ ಪುಸ್ತಕ ರಚಿಸಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಬಿಜೆಪಿ ನಾಯಕರಿಗೆ ಕಳುಹಿಸಿಕೊಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ”ಹಿಂದು ಕಾರ್ಯಕರ್ತರ ಕೊಲೆಗೆ ಸಂಬಂಧಪಟ್ಟಂತೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ದೂರು ನೀಡಿದ್ದಾರೆ. ಆದರೆ, ರಾಜ್ಯ ಸರಕಾರ ಈ ಬಗ್ಗೆ ತನಿಖೆ ನಡೆಸಿ ವಾಸ್ತವವಾಂಶ ಏನೆಂದು ಮನವರಿಕೆ ಮಾಡಿಕೊಟ್ಟಿದ್ದರೂ ಮೇಲಿಂದ ಮೇಲೆ ಇದೇ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಗೃಹ ಸಚಿವರಿಗೆ ಈ ಪುಸ್ತಕ ಕಳುಹಿಸಿಕೊಡುತ್ತೇವೆ. ಜತೆಗೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಅನಂತಕುಮಾರ್‌ ಹೆಗಡೆ, ಸಿ.ಟಿ.ರವಿ ಅವರಿಗೆ ಒಂದೊಂದು ಪ್ರತಿ ಕಳುಹಿಸಲಾಗುವುದು. ಫೆಬ್ರವರಿ 4 ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಬಳಿಕ ಪುಸ್ತಕ ಬಿಡುಗಡೆಗೆ ದಿನಾಂಕ ನಿಗದಿ ಮಾಡುತ್ತೇನೆ,” ಎಂದು ಹೇಳಿದರು.

”ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ, ಬೆಂಗಳೂರಿನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪ ಮಾಡುವ ಮಾಜಿ ಗೃಹ ಸಚಿವ ಆರ್‌.ಅಶೋಕ್‌ ದಾಖಲೆಗಳನ್ನು ಗಮನಿಸಲಿ. ಅಶೋಕ್‌ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 96 ಕೊಲೆ ಪ್ರಕರಣಗಳು ನಡೆದಿದ್ದು, ನಮ್ಮ ಸರಕಾರದ ಅವಧಿಯಲ್ಲಿ 67 ಪ್ರಕರಣಗಳು ಮಾತ್ರ ನಡೆದಿದೆ. ಬಿಜೆಪಿಯವರು ಯಾರದ್ದಾದರೂ ಕೊಲೆಯಾಗುವುದನ್ನೇ ಕಾಯುತ್ತಾ ಇರುತ್ತಾರೆ. ಆ ಬಳಿಕ ಅದಕ್ಕೆ ರಾಜಕೀಯ ಬಣ್ಣ ಕಟ್ಟಿ ಸತ್ತವರನ್ನು ತಮ್ಮ ಪಕ್ಷದ ಕಾರ್ಯಕರ್ತರು ಎಂದು ಘೋಷಿಸಿಕೊಳ್ಳುತ್ತಾರೆ. ಎಲ್ಲ ಪ್ರಕರಣಗಳಿಗೂ ರಾಜಕೀಯ ಲೇಪ ಹಚ್ಚುವುದು ಸರಿಯಲ್ಲ. ಈ ವಿಚಾರದಲ್ಲಿ ಅಶೋಕ್‌ ಜತೆ ನಾನು ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ,” ಎಂದು ಸವಾಲು ಹಾಕಿದರು.

”ವೀರಪ್ಪ ಮೊಯ್ಲಿ ನನ್ನ ರಾಜಕೀಯ ಗುರುಗಳು. ಅವರ ರೀತಿ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಅಶೋಕ್‌ ಆರೋಪಿಸಿದ್ದಾರೆ. ನಾನು ಕೆಲ ದಿನಗಳ ಹಿಂದೆ ಬಿಜೆಪಿಯ ಕೆಲ ಸ್ನೇಹಿತರ ಬಳಿ ವಿಚಾರಿಸಿದಾಗ ಒಂದು ಸತ್ಯ ತಿಳಿದು ಬಂದಿದೆ. ಆರ್‌.ಅಶೋಕ್‌ ಸತ್ಯ ಹರಿಶ್ಚಂದ್ರರ ನೇರ ವಂಶಸ್ಥರಂತೆ. ಈ ಬಗ್ಗೆ ಡಿಎನ್‌ಎ ಟೆಸ್ಟ್‌ ಮಾಡುವ ಅಗತ್ಯವೂ ಇಲ್ಲವಂತೆ,” ಎಂದು ವ್ಯಂಗ್ಯವಾಡಿದರು.

ಸಂತೋಷ್‌ ಕೊಲೆ ಪ್ರಕರಣದಲ್ಲಿ ಬಿಜೆಪಿಯವರು ವಿನಾ ಕಾರಣ ರಾಜಕೀಯ ಬೆರೆಸುತ್ತಿದ್ದಾರೆ. ಆರೋಪಿಗಳು ಹಾಗೂ ಸಂತೋಷ್‌ ಕಳೆದ 5 ವರ್ಷದಿಂದ ಗೆಳೆಯರಾಗಿದ್ದು, ತನಿಖೆಯನ್ನು ಸಿಸಿಬಿಗೆ ಒಪ್ಪಿಸಲಾಗಿದೆ. ಮೃತ ಸಂತೋಷ್‌ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ರಾಮಲಿಂಗಾರೆಡ್ಡಿ

Comments are closed.