ಕರ್ನಾಟಕ

ಕೇಂದ್ರ ಬಜೆಟ್‌ಗೆ ಕರ್ನಾಟಕವೇ ಸ್ಫೂರ್ತಿ: ಜಯಚಂದ್ರ

Pinterest LinkedIn Tumblr


ಬೆಂಗಳೂರು: ಕೃಷಿ, ಮಾರುಕಟ್ಟೆ, ಸಾಲ‌ ಕೊಡೊ ವಿಚಾರದಲ್ಲಿ ಕರ್ನಾಟಕವನ್ನೇ ಸ್ಫೂರ್ತಿಯಾಗಿಸಿಕೊಂಡು ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ಬಜೆಟ್ ನಲ್ಲಿ ಘೋಷಣೆ ಮಾಡುವುದನ್ನೇ ಸಾಧನೆಯಾಗಿ ಬಿಂಬಿಸುವುದಕ್ಕಿಂತ,ಅದರ ಅನುಷ್ಠಾನವಾಗಬೇಕಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ವರವಾಗೋ ಪ್ರಧಾನ ಮಂತ್ರಿ ಕೃಷಿ ಸಿಂಚನ್ ಯೋಜನೆ ಜಾರಿ ಮಾಡಿತ್ತು. ಇಡೀ ದೇಶದ ಎಲ್ಲಾ ಜಿಲ್ಲೆಗಳಲ್ಲೂ ಜಲ ಮೂಲವನ್ನ ಉಳಿಸುವ ಪ್ರಯತ್ನ ಮಾಡಿದ್ದರೂ ಇಲ್ಲಿವರೆಗೂ ಆ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಬೆಳೆಗಾರರ ಸಮಸ್ಯೆಗೆ ಪರಿಹಾರ ಕುರಿತು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಎಂಟು ಸಾವಿರ ಕೋಟಿ ರೂ ಮೌಲ್ಯದ ಅಡಿಕೆ, ತೆಂಗಿನ ಮರಗಳು ನಾಶವಾಗಿವೆ. ರೈತರ ಸಮಸ್ಯೆಗಳ ಕುರಿತು ಕಾಳಜಿಯೇ ಇಲ್ಲದಂತಾಗಿದೆ ಎಂದು ಜೆಡಿಎಸ್ ಮುಖಂಡ ಎಚ್‌.ಡಿ ರೇವಣ್ಣ ಟೀಕಿಸಿದ್ದಾರೆ.

Comments are closed.